
ನವದೆಹಲಿ(ಜು.17): ವ್ಯಕ್ತಿ ಹತ್ಯೆ ಮಾಡಿದರೆ 2 ವರ್ಷ ಶಿಕ್ಷೆ ಜಾನುವಾರುಗಳನ್ನು ಕೊಂದರೆ 10 ವರ್ಷ ಜೈಲು ಇದು ನಮ್ಮದೇಶದ ನ್ಯಾಯಾಂಗ ವ್ಯವಸ್ಥೆ. ಸ್ವತಃ ಹರ್ಯಾಣದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜೀವ್ ಕುಮಾರ್ ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದೇ ನ್ಯಾಯಾಧೀಶರು ಉದ್ಯಮಿಯೊಬ್ಬರ ಪುತ್ರ ಬಿಎಂಡಬ್ಲ್ಯು ಕಾರನ್ನು ಬೇಕಾಬಿಟ್ಟಿ ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಕಾರು ಚಾಲನೆ ಮಾಡಿದ್ದ 30ರ ಹರೆಯದ ಉತ್ಸವ್ ಭಾಸಿನ್‍ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ 10 ಲಕ್ಷ ಮತ್ತು ಗಾಯಾಳು ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಧನ ನೀಡುವಂತೆ ತೀರ್ಪು ನೀಡಿದ್ದರು
ಆದರೆ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಜಾನುವಾರುಗಳನ್ನು ಹತ್ಯೆ ಮಾಡಿದರೆ 7 ರಿಂದ 10 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗುತ್ತದೆ' ಎಂದು ನಮ್ಮ ವ್ಯವಸ್ಥೆ ಎಂದು ಅಸಹಾಕತೆ ವ್ಯಕ್ತಪಡಿಸಿದ್ದಾರೆ. 2008 ಸೆಪ್ಟೆಂಬರ್ 11ರಂದು ರಾತ್ರಿ ಬಿಬಿಎ ವಿದ್ಯಾರ್ಥಿಯೊಬ್ಬರ ಮೇಲೆ ತನ್ನ ಬಿಎಂಡ್ಲ್ಯು ಕಾರು ಹರಿಸಿ ಸಾವಿಗೆ ಕಾರಣವಾಗಿದ್ದ. ಅಲ್ಲದೆ ಬಾಸಿನ್'ಗೆ ಜಾಮೀನು ಪಡೆಯುವ ಅವಕಾಶವನ್ನು ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.