ಐದರಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಜಯಭೇರಿ

Published : Nov 10, 2018, 10:50 AM IST
ಐದರಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಜಯಭೇರಿ

ಸಾರಾಂಶ

ಇನ್ನೇನು ಕೆಲವೇ ದಿನಗಳಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು ಐದರಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. 

ನವದೆಹಲಿ :  ಇದೇ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳ ಕೂಟವು 3 ರಾಜ್ಯಗಳಲ್ಲಿ ಜಯಸಲಿದೆ ಎಂದು ಸಿ-ವೋಟರ್‌ ಸಮೀಕ್ಷೆ ಹೇಳಿದೆ. ಇದು ಇತರ ಸಮೀಕ್ಷೆಗಳಿಗಿಂತ ಕೊಂಚ ಭಿನ್ನ ಭವಿಷ್ಯ ನುಡಿದಿದೆ.

ರಾಜಸ್ಥಾನ: 200 ಸದಸ್ಯಬಲದ ರಾಜಸ್ಥಾನದಲ್ಲಿ ಬಿಜೆಪಿ 45, ಕಾಂಗ್ರೆಸ್‌ 145 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಮಧ್ಯಪ್ರದೇಶ:  ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 116 ಹಾಗೂ ಬಿಜೆಪಿ 107 ಸೀಟು ಗಳಿಸಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

ತೆಲಂಗಾಣ:  ತೆಲಂಗಾಣದ 119 ಕ್ಷೇತ್ರಗಳಲ್ಲಿ ಕಾಂಗ್ರೆಸ್‌+ತೆಲುಗುದೇಶಂ ಮೈತ್ರಿಕೂಟ 64 ಸ್ಥಾನ ಗಳಿಸಿ ಸರಳ ಬಹುಮತ ಸಾಧಿಸಲಿದೆ ಎಂದಿದೆ ಸಿ-ವೋಟರ್‌.

ಛತ್ತೀಸ್‌ಗಢ:  ಛತ್ತೀಸ್‌ಗಢದ 90 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 41 ಹಾಗೂ ಬಿಜೆಪಿ 43 ಸ್ಥಾನ ಗಳಿಸಲಿದ್ದು, ಅತಂತ್ರ ಸ್ಥಿತಿ ಸೃಷ್ಟಿಯಾಗಲಿದೆ. 6 ಸ್ಥಾನ ಗಳಿಸಲಿರುವ ಇತರರು ನಿರ್ಣಾಯಕರಾಗಲಿದ್ದಾರೆ.

ಮಿಜೋರಂ:  40 ಸ್ಥಾನ ಇರುವ ಮಿಜೋರಂನಲ್ಲೂ ಅತಂತ್ರ ವಿಧಾನಸಭೆ ಭವಿಷ್ಯ ನುಡಿಯಲಾಗಿದೆ. ಮಿಜೋ ನ್ಯಾಷನಲ್‌ ಫ್ರಂಟ್‌ 17, ಕಾಂಗ್ರೆಸ್‌ 12, ಝೋರಂ ಪೀಪಲ್ಸ್‌ ಪಕ್ಷ 9 ಸ್ಥಾನ ಪಡೆಯುವ ಭವಿಷ್ಯ ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು