ಗ್ರಾಹಕರಿಗೆ ಶಾಕ್‌ : ಅಡುಗೆ ಅನಿಲ ದರ ಏರಿಕೆ

By Web DeskFirst Published Nov 10, 2018, 10:35 AM IST
Highlights

ಸಿಲಿಂಡರ್‌ ಪೂರೈಕೆ ಮಾಡುವ ಡೀಲರ್‌ಗಳ ಕಮಿಷನ್‌ ಅನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಇದರಿಂದಾಗಿ ಪ್ರತೀ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಏರಿಕೆಯಾಗಿ ಗ್ರಾಹಕರಿಗೆ ಶಾಕ್ ಎದುರಾಗಿದೆ. 

ನವದೆಹಲಿ: ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ ಮಾಡುವ ಡೀಲರ್‌ಗಳ ಕಮಿಷನ್‌ ಅನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಇದರಿಂದಾಗಿ ಪ್ರತೀ ಅಡುಗೆ ಅನಿಲ ಸಿಲಿಂಡರ್‌ ಮೇಲೆ 2 ರು. ಹೆಚ್ಚುವರಿ ಹೊರೆಯನ್ನು ಗ್ರಾಹಕರ ಮೇಲೆ ಹೇರಿದಂತಾಗಿದೆ.

ಈ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆಯು 505.34 ರುಪಾಯಿಯಿಂದ 507.42 ರು.ಗೆ ಏರಿಕೆಯಾಗಿದೆ. 2017ರ ಸೆಪ್ಟೆಂಬರ್‌ನಲ್ಲಿ 14 ಕೇಜಿ ಸಿಲಿಂಡರ್‌ಗೆ 48.89 ರು. ಹಾಗೂ 5 ಕೇಜಿ ಸಿಲಿಂಡರ್‌ಗೆ 24.20 ರು. ಡೀಲರ್‌ಗಳಿಗೆ ಕಮಿಷನ್‌ ಆಗಿ ನಿಗದಿ ಮಾಡಲಾಗಿತ್ತು. 

ಇದೀಗ ಕಮಿಷನ್‌ ಪರಿಷ್ಕರಣೆ ಮಾಡಿದ್ದರಿಂದ 14 ಕೇಜಿ ಸಿಲಿಂಡರ್‌ಗೆ 50.58 ರು. ಹಾಗೂ 5 ಕೇಜಿ ಸಿಲಿಂಡರ್‌ಗೆ 25.29 ರು.ಗೆ ಕಮಿಷನ್‌ ಏರಿಕೆಯಾಗಿದೆ.

click me!