ಪಿಒಕೆ ಬಿಡುವಂತೆ ಕ್ಸಿಗೆ 56 ಇಂಚಿನ ಎದೆಯುಳ್ಳ ಪ್ರಧಾನಿ ಹೇಳಿದ್ರಾ?: ಕಾಂಗ್ರೆಸ್!

By Web Desk  |  First Published Oct 11, 2019, 4:05 PM IST

ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಭಾರತ ಪ್ರವಾಸ| ಕ್ಸಿ ಅವರಲ್ಲಿ ಏನೇನು ಕೇಳಬೇಕು ಎಂದು ಲಿಸ್ಟ್ ಕೊಟ್ಟ ಕಾಂಗ್ರೆಸ್| ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಬೆಂಬಲಿಸಿದ್ದ ಚೀನಾ| ಪಿಒಕೆ ಬಿಡುವಂತೆ ಕ್ಸಿ ಅವರನ್ನು ಪ್ರಧಾನಿ ಮೋದಿ ಏಕೆ ಕೇಳಲಿಲ್ಲ ಎಂದು ಕೇಳಿದ ಕಾಂಗ್ರೆಸ್| ಮೋದಿ ಅವರ 56 ಇಂಚಿನ ಎದೆಯಲ್ಲಿ ಧೈರ್ಯವಿಲ್ಲವೇ ಎಂದು ತಿವಿದ ಪ್ರತಿಪಕ್ಷ| ಹಾಂಕಾಂಗ್, ಟಿಬೆಟ್‌ನ ದೌರ್ಜನ್ಯ ಪ್ರಸ್ತಾಪಿಸಲಿಲ್ಲವೇಕೆ ಎಂದು ಕೇಳಿದ ಕಾಂಗ್ರೆಸ್|


ನವದೆಹಲಿ(ಅ.11): ಕಾಶ್ಮೀರ ವಿಚಾರ ತಮ್ಮ ಗಮನದಲ್ಲಿದೆ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿರುವ ಚೀನಾಗೆ ಸೂಕ್ತ ಪ್ರತಿಕ್ರಿಯೆ ನೀಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಕಾಶ್ಮೀರ ಕುರಿತು ಸೊಲ್ಲೆತ್ತುವ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಅವರಿಗೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಕಾಲ್ತೆಗೆಯುವಂತೆ ನಮ್ಮ 56 ಇಂಚಿನ ಪ್ರಧಾನಿ ಮೋದಿ ಹೇಳಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

As Xi Jinping supports Imran Khan on Art.370 Modiji look him in the eye at Mamallapuram and say :

1) Vacate 5000km of land in POK occupied by China trans-Karakoram
2) No Huawei in India for 5G

Show your 56” ki chhati !

Or is it :

Haathi ke daant khane ke aur dikhane ke aur

— Kapil Sibal (@KapilSibal)

Tap to resize

Latest Videos

undefined

ಪಿಒಕೆಯಲ್ಲಿ ಚೀನಾ 5 ಸಾವಿರ ಎಕರೆ ಭೂಮಿ ಖರೀದಿಸಿದ್ದು, ಇದನ್ನು ಪ್ರಶ್ನಿಸದ ಮೋದಿ ಭಾರತದ ಶಕ್ತಿಯನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹರಿಹಾಯ್ದಿದ್ದಾರೆ.

ಚೀನಾ ಕಾಶ್ಮೀರ ವಿಚಾರ ಕೇಳಿದರೆ, ಹಾಂಕಾಂಗ್'ನಲ್ಲಿ ಅದು ನಡೆಸುತ್ತಿರುವ ದೌರ್ಜನ್ಯ, ಟಿಬೆಟ್‌ನಲ್ಲಿನ ಸ್ವಾತಂತ್ರ್ಯ ಹರಣ, ದಕ್ಷಿಣ ಚೀನಾ ಸಮುದ್ರದಲ್ಲಿ ಅದರ ಅಟ್ಟಹಾಸಗಳ ಕುರಿತು ಮೋದಿ ಪ್ರಶ್ನಿಸಬೇಕಲ್ಲವೇ ಎಂದು ಕಾಂಗ್ರೆಸ್ ಹೇಳಿದೆ.

click me!