ಮೋದಿಗೆ ಹಕ್ಕಿ ಹಿಕ್ಕೆ ಎಂದ ರಮ್ಯಾಗೆ ಇಕ್ಕಿದ ನೆಟ್ಟಿಗರು!

Published : Nov 01, 2018, 07:11 PM ISTUpdated : Nov 01, 2018, 07:23 PM IST
ಮೋದಿಗೆ ಹಕ್ಕಿ ಹಿಕ್ಕೆ ಎಂದ ರಮ್ಯಾಗೆ ಇಕ್ಕಿದ ನೆಟ್ಟಿಗರು!

ಸಾರಾಂಶ

ಕಾಂಗ್ರೆಸ್ ಸೋಶಿಯಲ್  ಮೀಡಿಯಾ ಮುಖ್ಯಸ್ಥೆ ಎನ್ನಿಸಿಕೊಂಡು ಸದಾ ವಿವಾದವನ್ನೇ ಮೈಮೇಲೆ ಎಳೆದುಕೊಳ್ಳುತ್ತಿದ್ದ ರಮ್ಯಾ ಕೆಲ ದಿನಗಳಿಂದ ತಣ್ಣಗಾಗಿದ್ದರು. ಆದರೆ ಉಕ್ಕಿನ ಮನುಷ್ಯ ವಲ್ಲಭ ಭಾಯ್ ಪಟೇಲ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿಯೂ ಮತ್ತೊಂದು ವಿವಾದ ಹೊತ್ತುಕೊಂಡಿದ್ದಾರೆ.

ನವದೆಹಲಿ[ನ.01] ಸದಾ ಒಂದಿಲ್ಲೊಂದು ವಿವಾದಾತ್ಮಕ ಟ್ವೀಟ್​ ಮಾಡಿಯೇ ಸುದ್ದಿ ಮಾಡುವ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಈ ಬಾರಿ ಅಂಥದ್ದೇ ಕೆಲಸ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ಯನು ಹಕ್ಕಿಯ ಹಿಕ್ಕೆಗೆ ಹೋಲಿಸಿ ಬರೆದ ರೀತಿಯ ಟ್ವೀಟ್ ಸದ್ದು ಮಾಡಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್​ ಅವರ ಪ್ರತಿಮೆ ಅನಾವರಣಗೊಳಿಸುವ ವೇಳೆ ಕ್ಲಿಕ್ಕಿಸಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವ ರಮ್ಯಾ ಸಾಲೊಂದನ್ನು ಬರೆದಿದ್ದಾರೆ.

ಫೋಟೋದಲ್ಲಿ ಮೋದಿ ಪಟೇಲರ ಪ್ರತಿಮೆಯ ಕಾಲಿನ ಬಳಿ ನಿಂತಿದ್ದಾರೆ. ರಮ್ಯಾ ಅವರ ಟ್ವೀಟ್‌ಗೆ ತರೇವಾರಿ ಪ್ರತಿಕ್ರಿಯೆ ಬಂದಿದ್ದು ರಾಹುಲ್ ಮತ್ತು ರಮ್ಯಾರನ್ನು ಜಾಲತಾಣಿಗರು ವಿವಿಧ ಫೋಟೋ ಬಳಸಿ ಝಾಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?