
ಬೆಂಗಳೂರು[ನ.01] ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಅಂತ ಹಿರಿಯ ಕವಿಗಳು ಹೇಳಿದ್ದಾರೆ. ಆದರೆ ಅದರ ಅರ್ಥ ಬಿಜೆಪಿಗೆ ಗೊತ್ತಿಲ್ಲ. ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಕಾದು ನೋಡಿ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದ ಚಂದ್ರಶೇಖರ್ ವಿಚಾರ ಕುರಿತು ಸಿಎಂ ಮಾತನಾಡಿದರು. ನಾನು ಬಳ್ಳಾರಿಯಿಂದ ತಡವಾಗಿ ಬಂದೆ. ಇಂದು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದೆ. ಆಗ ಈ ವಿಚಾರವಾಗಿ ಚೀಟಿ ಬಂತು. ಇದರ ಬಗ್ಗೆ ವಿವರವಾದ ಮಾಹಿತಿ ಈ ಸದ್ಯ ಇಲ್ಲ ನಾನು ಯಾರನ್ನೂ ಹಣ ಕೊಟ್ಟು ಖರೀದಿಸಿಲ್ಲ ಎಂದು ಸ್ಪಷ್ಟ ಪಡಿಸಿದರು. ಬಿಜೆಪಿಯವರು ಹಲವಾರು ಆಮಿಷಗಳನ್ನ ಒಡ್ಡಿ ಸೆಳಿತಾರೆ. ಇದು ಅವರ ನಡೆತೆಗೆ ಸಿಕ್ಕ ಉತ್ತರ. ರಾಮನಗರದಿಂದ ಬಿಜೆಪಿಯ ಅಭ್ಯರ್ಥಿ ಚುನಾವಣೆ ಕಣದಿಂದ ಹೊರ ಬಂದಿದ್ದಾರೆ. ಹಿಂದೆ ಎಸ್ಎಂ ಕೃಷ್ಣ ಅವರಿಗೂ ಇದೇ ಆಗಿತ್ತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.