
ಜೈಪುರ, [ನ.26] ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಸಧ್ಯ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ್, ಛತ್ತೀಸ್‌ಗಢ ರಾಜ್ಯ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಎಲ್ಲ ರಾಜ್ಯಗಳ ಭೇಟಿಗಳಲ್ಲಿಯೂ ರಾಹುಲ್ ಗಾಂಧಿ ಅವರು ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
‘ರಾಹುಲ್ ಗೆ ಬ್ರಾಹ್ಮಣ ಯುವತಿ ಜೊತೆ ಮದ್ವೆ ಮಾಡಿಸಿ ಅಂದಿದ್ದೆ: ಆದರೆ...!’
ಈ ಬಗ್ಗೆ ಭಾರತೀಯ ಜನತಾ ಪಕ್ಷಗಳ ನಾಯಕರಿಂದ ಟೀಕೆಗಳು ವ್ಯಕ್ತವಾಗಿದ್ದು, ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಅವರು ಇತ್ತೀಚೆಗೆ ರಾಹುಲ್ ಜನಿವಾರಧಾರಿ ಬ್ರಾಹ್ಮಣ, ಅವರ ಗೋತ್ರ ಯಾವುದು ಎಂದು ಪ್ರಶ್ನಿಸಿದ್ದರು
ಇದೀಗ ಅದಕ್ಕೆ ರಾಹುಲ್, ತಮ್ಮ ಕುಲ, ಗೋತ್ರವನ್ನ ಬಹಿರಂಗಪಡಿಸಿದ್ದು, ರಾಜಸ್ಥಾನದ ಬ್ರಹ್ಮ ದೇವಸ್ಥಾನದಲ್ಲಿ ಗೋತ್ರದ ಬಗ್ಗೆ ಪೂಜಾರಿ ಪ್ರಶ್ನಿಸಿದಾಗ ರಾಹುಲ್ ಗಾಂಧಿ, ತಮ್ಮದು ದತ್ತಾತ್ರೇಯ ಗೋತ್ರ, ಕೌಲ್ ಬ್ರಾಹ್ಮಣ ಕುಲ ಎಂದಿದ್ದಾರೆ.
ಅಷ್ಟೇ ಅಲ್ಲದೇ ಪೂಜೆ ವೇಳೆ ತಮ್ಮ ಪೂರ್ವಜರಿಗೆ ಸೇರಿದ ಎಲ್ಲ ಮಾಹಿತಿ ರಾಹುಲ್ ತಿಳಿಸಿದ್ದಾರೆ.
ಆದ್ರೆ ಇದೀಗ ದೇವಸ್ಥಾನದ ಪೂಜಾರಿ ರಾಹುಲ್ ಗಾಂಧಿ ಕಾಶ್ಮೀರಿ ಬ್ರಾಹ್ಮಣ ಎಂದು ಹೇಳಿದ್ದಾರೆ. ಇದ್ರಿಂದ ರಾಹುಲ್ ಹೇಳಿದ್ದು ಸರಿ ನಾ? ಅಥವಾ ಪೂಜಾರಪ್ಪ ಹೇಳಿದ್ದು ನಿಜ ನಾ ಎನ್ನುವುದು ಗೊಂದಲಮಯಾವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ