ರಾಜ್ಯಸಭೆಯಲ್ಲಿ ಮೊದಲ ಭಾಷಣ ಮಾಡುವ ಮುಂಚೆಯೇ ಸಚಿನ್ ‘ಔಟ್’

Published : Dec 21, 2017, 04:45 PM ISTUpdated : Apr 11, 2018, 12:55 PM IST
ರಾಜ್ಯಸಭೆಯಲ್ಲಿ ಮೊದಲ ಭಾಷಣ ಮಾಡುವ ಮುಂಚೆಯೇ ಸಚಿನ್ ‘ಔಟ್’

ಸಾರಾಂಶ

ಕ್ರಿಕೆಟ್ ದಿಗ್ಗಜ ಹಾಗೂ ಸಂಸದ ಸಚಿನ್ ತೆಂಡೂಲ್ಕರ್ ಇಂದು ಸಂಸತ್ತಿನಲ್ಲಿ ಮೊದಲ ಭಾಷಣ ಮಾಡುವ ಮುಂಚೆಯೇ ‘ಔಟಾದ’ ಘಟನೆ ನಡೆದಿದೆ.

ನವದೆಹಲಿ: ಕ್ರಿಕೆಟ್ ದಿಗ್ಗಜ ಹಾಗೂ ಸಂಸದ ಸಚಿನ್ ತೆಂಡೂಲ್ಕರ್ ಇಂದು ಸಂಸತ್ತಿನಲ್ಲಿ ಮೊದಲ ಭಾಷಣ ಮಾಡುವ ಮುಂಚೆಯೇ ‘ಔಟಾದ’ ಘಟನೆ ನಡೆದಿದೆ.

ರಾಜ್ಯಸಭೆಯಲ್ಲಿ ಕ್ರೀಡೆಗೆ ಸಂಬಂಧಿಸಿದ ಚರ್ಚೆಯನ್ನು ಇಂದು ಸಚಿನ್ ಆರಂಭಿಸಬೇಕಿತ್ತು.  ಅದಕ್ಕಾಗಿಯೇ ಎಂದು ಸಚಿನ್ ಎದ್ದು ನಿಂತಾಗ, ಕಾಂಗ್ರೆಸ್ ಸಂಸದರ ಗದ್ದಲ ಆರಂಭವಾಗಿದೆ.  

ಗುಜರಾತ್ ಚುನಾವಣಾ ರ್ಯಾಲಿಯೊಂದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ  ಪ್ರಧಾನಿ ನರೇಂದ್ರ ಮೋದಿ ಆಕ್ಷೇಪಕಾರಿ ಹೇಳಿಕೆ ನೀಡಿದ್ದಾರೆ, ಅದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸಂಸದರು ಗದ್ದಲ ನಡೆಸಿದ್ದಾರೆ.

2012ರಲ್ಲಿ ರಾಜ್ಯಸಭೆಗೆ ನಾಮಾಂಕಿತರಾಗಿರುವ ಸಚಿನ್, ಅಧಿವೇಶನಗಳಲ್ಲಿ ಕಡಿಮೆ ಹಾಜರಾತಿ ಹಿನ್ನೆಲೆಯಲ್ಲಿ ಟೀಕೆಗೊಳಗಾಗಿದ್ದಾರೆ. ಆದರೆ ಇದೇ ಮೊದಲ ಬಾರಿ,  ಭಾರತದಲ್ಲಿ ಕ್ರೀಡೆಯ ಭವಿಷ್ಯದ ಬಗ್ಗೆ ಸಣ್ಣ ಚರ್ಚೆಯನ್ನು ನಡೆಸುವ ಬಗ್ಗೆ ನೋಟಿಸ್ ನೀಡಿದ್ದರು. ಆದರೆ ಕಾಂಗ್ರೆಸ್ ಸಂಸದರ ಗದ್ದಲದಿಂದಾಗಿ ಸಚಿನ್’ಗೆ ಮಾತನಾಡುವ ಅವಕಾಶ ಸಿಗಲಿಲ್ಲ.

ಈ ವೇಳೆ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಸಂಸದರನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?