
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರು ಮೂಲದ ಬಾಲಕಿಗೆ 5 ಲಕ್ಷ ರೂಪಾಯಿಯ ಆರ್ಥಿಕ ನೆರವು ನೀಡಿದ್ದಾರೆ. ಬಾಲಕಿ ಉಮ್ನಾ ಆಯೇಷಾ ಶೇಖ್ ಅವರ ತಂದೆಗೆ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ದಾರೆ. ಜಮೀರ್ ಅಹ್ಮದ್ ಅವರು ಈ ಚೆಕ್‌ನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮೂಲಕ ಹಸ್ತಾಂತರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ನೀಡೋದಾಗಿ ಭರವಸೆ ನೀಡಿದ್ದಾರೆ. ಚೆಕ್ ಸ್ವೀಕರಿಸಿದ ಬಾಲಕಿ ಉಮ್ನಾ ತಂದೆ ಭಾವುಕರಾದರು. ತಮಗೆ ನೆರವು ನೀಡಿದ ಜಮೀರ್ ಅಹ್ಮದ್ ಅವರಿಗೆ ಒಳ್ಳೆಯದಾಗಲಿ ಎಂದು ಅಲ್ಲಾಹುವಿನ ಬಳಿ ಪ್ರಾರ್ಥಿಸೋದಾಗಿ ಹೇಳಿದರು.
ಈ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರಿನ ಪುಟ್ಟ ಬಾಲಕಿ ಉಮ್ನಾ ಆಯೇಷಾ ಶೇಖ್ ಅವರ ಚಿಕಿತ್ಸೆಗೆ ₹5 ಲಕ್ಷ ಆರ್ಥಿಕ ನೆರವು ನೀಡಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಮೂಲಕ ಬಾಲಕಿಯ ತಂದೆ ಶೇಖ್ ಅಶ್ಫಾಕ್ ಅಹಮದ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು. ಈ ನೆರವು ಕುಟುಂಬದ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿ, ಬಾಲಕಿಯ ಚಿಕಿತ್ಸೆಗೆ ಸಹಕಾರಿಯಾಗಲಿ ಎಂದು ಆಶಿಸುತ್ತೇನೆ. ಉಮ್ನಾ ಆಯೇಷಾ ಶೀಘ್ರ ಗುಣಮುಖಳಾಗಿ ಆರೋಗ್ಯದಿಂದ ನಲಿಯಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
16 ವರ್ಷದ ಉಮ್ಮಾ ಮೊದಲು ಟೈಫಾಯ್ಡ್‌ಗೆ ತುತ್ತಾಗಿದ್ದರು. ಟೈಫಾಯ್ಡ್‌ನಿಂದ ಉಂಟಾದ ಸೋಂಕು ಹೃದಯ, ಮೂತ್ರಪಿಂಡ ಸೇರಿದಂತೆ ದೇಹದ ಹಲವು ಭಾಗಗಳಿಗೆ ತಲುಪಿದೆ. ಈ ಸೋಂಕು ಮೆದುಳಿಗೆ ತಲುಪಿದ್ದರಿಂದ ಆಕೆ ಕೋಮಾದಲ್ಲಿದ್ದಾಲೆ. ಸದ್ಯ ಉಮ್ನಾ ಆಯೇಷಾ ಶೇಖ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಉಮ್ನಾ ತಂದೆ ಶೇಖ್ ಅಸ್ಪಾಕ್ ಅಹ್ಮದ್, ಇಂದು ಕೆಪಿಸಿಸಿ ಕಚೇರಿಯಲ್ಲಿ ಬಿ.ಕೆ.ಹರಿಪ್ರಸಾದ್ ಅವರ ಸಮ್ಮುಖದಲ್ಲಿ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸೋದಾಗಿ ಹೇಳಿದ್ದಾರೆ. ಇಲ್ಲಿಯವರೆಗೆ ಮಗಳ ಚಿಕಿತ್ಸೆಗಾಗಿ 70 ಲಕ್ಷ ರೂ. ಖರ್ಚು ಆಗಿದೆ. ಮುಂದೆಯೂ ನೆರವು ನೀಡುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಮಗಳ ಚಿಕಿತ್ಸೆಗಾಗಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಕಣ್ಣೀರು ಹಾಕಿದ್ದಾರೆ.
ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರಿನ ಪುಟ್ಟ ಬಾಲಕಿ ಉಮ್ನಾ ಆಯೇಷಾ ಶೇಖ್ ಅವರ ಚಿಕಿತ್ಸೆಗೆ ₹5 ಲಕ್ಷ ಆರ್ಥಿಕ ನೆರವು ನೀಡಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರ ಮೂಲಕ ಬಾಲಕಿಯ ತಂದೆ ಶೇಖ್ ಅಶ್ಫಾಕ್ ಅಹಮದ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.
ಈ ನೆರವು ಕುಟುಂಬದ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿ, ಬಾಲಕಿಯ ಚಿಕಿತ್ಸೆಗೆ ಸಹಕಾರಿಯಾಗಲಿ ಎಂದು ಆಶಿಸುತ್ತೇನೆ. ಉಮ್ನಾ ಆಯೇಷಾ ಶೀಘ್ರ ಗುಣಮುಖಳಾಗಿ ಆರೋಗ್ಯದಿಂದ ನಲಿಯಲಿ ಎಂದು ಹಾರೈಸುತ್ತೇನೆ.
Extended financial assistance of ₹5 lakh towards the treatment of Umna Ayesha Shaikh, a child from Mangaluru suffering from a rare illness. The cheque was handed over to her father, Shaikh Ashfaq Ahmed, through KPCC President Shri B. K. Hariprasad.
I hope this support helps ease the family's burden and contributes towards the child's treatment and recovery. Wishing Umna Ayesha a speedy recovery and good health.
@inckarnataka @HariprasadBK2
— B Z Zameer Ahmed Khan (@BZZameerAhmedK) November 25, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.