ನಾಗೇಂದ್ರಗೆ ಸಚಿವ ಸ್ಥಾನ ಮರಳಿ ಸಿಗುತ್ತಾ? ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

Published : Nov 26, 2026, 10:26 AM IST
Priyank Kharge

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಈ ಬಗ್ಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರವನ್ನು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದಾರೆ.

ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಿ, ಬೆಂಗಳೂರಿನ 24ನೇ ಸಿಸಿಎಚ್ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಪ್ರಕರಣದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಬಿ. ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರಾಗಿದ್ದ ಶಾಸಕ ಬಸವರಾಜ್ ದದ್ದಲ್ ಅವರನ್ನು ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಿರುವುದು ಗಮನ ಸೆಳೆದಿದೆ. ಇದರಿಂದ ನಾಗೇಂದ್ರ ಅವರಿಗೆ ಪರೋಕ್ಷವಾಗಿ ಕ್ಲೀನ್‌ಚಿಟ್ ಸಿಕ್ಕಂತಾಗಿದೆ.

ದೋಷಾರೋಪಪಟ್ಟಿ ಸಲ್ಲಿಕೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಂಪುಟಕ್ಕೆ ವಾಪಸ್ ತಗೊಳ್ಳುವಂತ ಮಾತುಕತೆ ಆರಂಭ ಆಗಬಹುದಾ? ಎಂಬ ಮಾರ್ಧಯಮದ ಪ್ರಶ್ನೆಗೆ ನೋಡಿ ಅದು ವರಿಷ್ಠರಿಗೆ ಬಿಟ್ಟಂತಹ ವಿಚಾರ. ಇದರಲ್ಲಿ ಯಾವುದೇ ರೀತಿಯಾದಂತಹ ಎಕನಾಮಿಕ್ ಟ್ರೈಲ್ ಏನಿದೆ? ಫ್ರಾಡ್ ಟ್ರೈಲ್ ಏನಿದೆ ಯಾವುದು ಸಾಬೀತು ಆಗಿಲ್ಲ. ಹಿಂದೆಯಿಂದನೂ ಕೂಡ ನಾವು ಹೇಳ್ತಾ ಇದ್ವಿ. ಆಮೇಲೆ ಎಲ್ಲಾ ದಾಖಲೆಗಳೂ ಕೂಡ ಸಾರ್ವಜನಿಕರಲ್ಲಿ ಲಭ್ಯ ಇದೆ. ಬಿಜೆಪಿ ಅವರು ಸುಮ್ಮನೆ ಐಟಿ, ಇಡಿ ಯನ್ನ ದುರ್ಬಳಕೆ ಮಾಡಿಕೊಂಡಿ ಪ್ರಯತ್ನ ಪಟ್ರು. ಅದು ಯಾವುದು ಸಾಕ್ಷಿ ಇಲ್ಲ ಅಲ್ಲ ಅವರ ಹತ್ರ ಕೂಡ. So whatever it is as per law, as per evidence ನಾವು ಮಾಡ್ತಾ ಇರೋದು ಎಂದರು.

ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು

ಸಿಐಡಿ ನೀಡಿರುವ ಈ ವರದಿ ಪೂರ್ವಯೋಜಿತ ನಡೆ ಎಂಬ ಪ್ರತಿಪಕ್ಷಗಳ ಆರೋಪಕ್ಕೂ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ದಾಖಲೆಗಳನ್ನು ಆಧರಿಸಿಯೇ ಮಾತನಾಡುವುದು ಸೂಕ್ತ ಎಂದ ಅವರು, ಹಿಂದೆ ರಾಜ್ಯ ಸರ್ಕಾರ ಹಲವು ಪ್ರಕರಣಗಳನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದ ಸಂದರ್ಭಗಳಲ್ಲಿ ರಾಜ್ಯ ಸಂಸ್ಥೆಗಳ ಕಾರ್ಯವೈಖರಿಯನ್ನು ಶ್ಲಾಘಿಸಲಾಗಿತ್ತು ಎಂಬುದನ್ನು ನೆನಪಿಸಿದ್ದಾರೆ. ರಾಜ್ಯ ಪೊಲೀಸ್ ವ್ಯವಸ್ಥೆ ಸಮರ್ಥವಾಗಿಯೂ, ಪಾರದರ್ಶಕವಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಪುಟಕ್ಕೆ ವಾಪಸ್ ಕರೆತರುವ ನಿರ್ಧಾರ ವರಿಷ್ಠರಿಗೆ ಸೇರಿದ್ದು

ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಮಾತುಕತೆಗಳು ಈಗ ಆರಂಭವಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ನೋಡಿ ಎರಡು ಸರಿ ಅವರು ರಾಜೀನಾಮೆಯನ್ನ ನೀಡಿದ್ದಾರೆ. ಯಾವುದೇತಪ್ಪು ಇರಲಿಲ್ಲ ಅಂದ್ರೂ ಕೂಡ ಸ್ವಪಕ್ಷದ ಹಿತಾದೃಷ್ಟಿಯಿಂದ ಹಿರಿಯರ ಮಾತು ಕೇಳಿ ಮಾಡಿದ್ದಾರೆ. ಈಗ ಅವರಿಗೆ ವಾಪಸ್ ತಗೊಳೋದು ಬಿಡೋದು ಅದು ವರಿಷ್ಠರಿಗೆ ಬಿಟ್ಟಂತಹ ವಿಚಾರ. ಬಟ್ ಬಿಜೆಪಿ ಅವರು ಅವರ ಮೇಲೆ ಏನು ಆರೋಪ ಮಾಡ್ತಾ ಇದ್ದಾರೆ ಅದು ಸುಳ್ಳು ಅಲ್ವಾ? ದಟ್ ಇಸ್ ಮೋರ್ ಇಂಪಾರ್ಟೆಂಟ್. ಅವರ ಪ್ರಾಮಾಣಿಕತೆ ಮತ್ತೆ ಅವರ ಆಡಳಿತದಲ್ಲಿ ನೀಡಿದಂತಹ ಪಾರದರ್ಶಕತೆ ಅದು ಸಾಬೀತಾಗಿದೆ. ಅದು ಬಹಳ ಪ್ರಮುಖವಾದದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Uttar Pradesh Poll Survey: ಈಗಲೇ ಯುಪಿ ಚುನಾವಣೆ ನಡೆದರೆ ಬಿಜೆಪಿ ಸ್ಥಾನ ಕುಸಿತ, ಎಸ್ಪಿಗೆ ಲಾಭ!
ರಾಜೀವ್​ ಗಾಂಧಿ ಕೊಲೆಗೆ ಸರ್ಕಾರದ್ದೇ ಸಂಚು? ಭದ್ರತೆ ತೆಗೆಯಲಾಗಿದ್ದ ಕುರಿತು ರಾಹುಲ್​ ಶಾಕಿಂಗ್​ ಹೇಳಿಕೆ ​