14 ಬಾಂಗ್ಲಾ ಪ್ರಜೆಗಳಿಗೆ ದೃಢೀಕರಣ ಪತ್ರ ಕೊಟ್ಟಿದ್ದ ಸರ್ಕಾರಿ ವೈದ್ಯನಿಗೆ ಈಗ ಸಂಕಷ್ಟ; ಹೈಕೋರ್ಟ್ ಹೇಳಿದ್ದೇನು?

Kannadaprabha News   | Kannada Prabha
Published : Nov 26, 2026, 07:02 AM IST
illegal bangladeshi aadhaar card

ಸಾರಾಂಶ

14 ಬಾಂಗ್ಲಾದೇಶಿ ಪ್ರಜೆಗಳಿಗೆ ಅಕ್ರಮವಾಗಿ ಆಧಾರ್ ಹಾಗೂ ಪಾಸ್‌ಪೋರ್ಟ್ ಪಡೆಯಲು ನೆರವಾದ ಸರ್ಕಾರಿ ವೈದ್ಯರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೆ ವಿಳಾಸ ದೃಢೀಕರಣ ಪತ್ರಗಳಿಗೆ ಸಹಿ ಹಾಕಿದ್ದಕ್ಕಾಗಿ ನ್ಯಾಯಪೀಠ ಅಸಮಾಧಾನ.

ಬೆಂಗಳೂರು (ನ.26): ಯಾವುದೇ ಸೂಕ್ತ ದಾಖಲೆಗಳಿಲ್ಲದಿದ್ದರೂ 14 ಬಾಂಗ್ಲಾದೇಶಿ ಪ್ರಜೆಗಳು(14 Bangladeshi nationals) ಅಕ್ರಮವಾಗಿ ಆಧಾರ್ ಕಾರ್ಡ್(Adhar Card) ಹಾಗೂ ಪಾಸ್​​ಪೋರ್ಟ್(Passport) ಪಡೆಯಲು ವಿಳಾಸ ದೃಢೀಕರಣ ಪತ್ರ(Address Verification Letter)ಗಳಿಗೆ ಸಹಿ ಹಾಕಿದ್ದ ಸರ್ಕಾರಿ ವೈದ್ಯರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್(High court) ನಿರಾಕರಿಸಿದೆ.

ಪ್ರಕರಣ ರದ್ದು ಕೋರಿ ಡಾ.ಲೋಕೇಶ್ ಅರ್ಜಿ

ಪ್ರಕರಣ ರದ್ದು ಕೋರಿ ಡಾ.ಲೋಕೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅರ್ಜಿದಾರರು ಸರ್ಕಾರಿ ವೈದ್ಯರಾಗಿ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಅವರ ಕರ್ತವ್ಯ. ಗೆಜೆಟೆಡ್ ಅಧಿಕಾರಿಯಾಗಿ ದಾಖಲೆಗಳನ್ನು ದೃಢೀಕರಿಸುವ ಅಧಿಕಾರ ಅವರಿಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ವಿಳಾಸಕ್ಕೆ ಸಂಬಂಧಿಸಿದಂತೆ ಯಾವುದೇ ಬಾಡಿಗೆ ಕರಾರು ಪತ್ರ ಅಥವಾ ಇತರೆ ಅಗತ್ಯ ದಾಖಲೆಗಳನ್ನು ಪರಿಶೀಲಿಸದೆ 14 ವಿದೇಶಿ ಪ್ರಜೆಗಳಿಗೆ ವಿಳಾಸ ದೃಢೀಕರಿಸಿದ್ದಾರೆ. ಒಂದಿಬ್ಬರಿಗೆ ಮಾಡಿದ್ದರೆ ಆಕಸ್ಮಿಕ ಎನ್ನಬಹುದಿತ್ತು. ಆದರೆ, ಅನೇಕರಿಗೆ ವಿಳಾಸ ದೃಢೀಕರಣ ಮಾಡಲಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಬಾಡಿಗೆ ನೀಡಿದವನಿಗೆ ರಿಲೀಫ್:

ಇದೇ ಪ್ರಕರಣದಲ್ಲಿ ಬಾಂಗ್ಲಾದೇಶದ ಇಬ್ಬರು ಪ್ರಜೆಗಳಿಗೆ ಶೆಡ್ ಬಾಡಿಗೆಗೆ ನೀಡಿದ್ದಲ್ಲದೆ, ಬಾಡಿಗೆ ಕರಾರು ಪತ್ರ ಮಾಡಿಸಿಕೊಟ್ಟು ಆಧಾರ್ ಕಾರ್ಡ್ ಪಡೆಯಲು ನೆರವಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಆರೋಪಿಯೊಬ್ಬರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ತನಿಖಾಧಿಕಾರಿಗಳು ಈ ಆರೋಪಿಯ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಬಾಂಗ್ಲಾದೇಶದ ಪ್ರಜೆಗಳಿಗೆ ಅಕ್ರಮವಾಗಿ ಭಾರತೀಯ ಗುರುತಿನ ಚೀಟಿಗಳನ್ನು ಪಡೆಯಲು ಸಹಾಯ ಮಾಡಿದ ಆರೋಪದ ಮೇಲೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಡಾ.ಲೋಕೇಶ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka Latest News Live: ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್: ತ.ನಾಡಿಗೆ ನೀರು ಹರಿಸಲು ಸೂಚನೆ
ಜಾಮೀನು ರದ್ದಾದ ಬೆನ್ನಲ್ಲೇ ಕಣ್ಣೀರಿಡುತ್ತಲೇ ಧಾರವಾಡ ನಿವಾಸ ಬಿಟ್ಟು ಬೆಂಗಳೂರಿನತ್ತ ಹೊರಟ ವಿನಯ್ ಕುಲಕರ್ಣಿ!