ಕೈ ಕೊಟ್ಟ ಪಕ್ಷೇತರ : ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ

By Web DeskFirst Published Jan 7, 2019, 3:57 PM IST
Highlights

ಅಧಿಕಾರ ಗದ್ದುಗೆ ಏರಲು ಬೆಂಬಲ ನೀಡಿದ್ದ ಪಕ್ಷೇತರ ಮುಖಂಡ ಇದೀಗ ಕೈ ಕೊಟ್ಟಿದ್ದು ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಮುಂದಾಗಿದ್ದು, ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಕಾಂಗ್ರೆಸ್ ಸದಸ್ಯರು ಮುಂದಾಗಿದ್ದಾರೆ. 

ಧಾರವಾಡ :  ಬಿಜೆಪಿ ಹಿಡಿತದಲ್ಲಿರುವ ಧಾರವಾಡ ಜಿಲ್ಲಾ ಪಂಚಾಯತ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ. 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಚೈತ್ರಾ ಶಿರೂರ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ 11 ಜನ ಜಿಲ್ಲಾ ಪಂಚಾಯತಿಯ ಕಾಂಗ್ರೆಸ್ ಸದಸ್ಯರು ಸಹಿ ಹಾಕಿದ್ದಾರೆ. 

22 ಸದಸ್ಯ ಬಲದ ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ 11 ಜನ ಕಾಂಗ್ರೆಸ್, 10 ಬಿಜೆಪಿ ಸೇರಿದಂತೆ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರ ಸದಸ್ಯರನ್ನು  ಸೆಳೆದುಕೊಂಡು ಬಿಜೆಪಿ ಜಿಲ್ಲಾ ಪಂಚಾಯತಿಯ ಅಧಿಕಾರದ ಗದ್ದುಗೆಗೇರಿತ್ತು. ಅಲ್ಲದೇ  ಉಪಾಧ್ಯಕ್ಷ ಸ್ಥಾನವನ್ನು  ಪಕ್ಷೇತರರಾಗಿ ಆಯ್ಕೆಯಾಗಿದ್ದ  ಶಿವಾನಂದ ಕರಿಗಾರರಿಗೆ ಬಿಟ್ಟುಕೊಡಲಾಗಿತ್ತು.  

ನಾಳೆ ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ಇರುತ್ತಾ ರಜೆ..?

ಉಪಾಧ್ಯಕ್ಷರಾಗಿದ್ದ ಕರಿಗಾರ  ಕಾಂಗ್ರೆಸ್ ನತ್ತ ವಾಲಿದ್ದು, ಅಧ್ಯಕ್ಷೆ ಚೈತ್ರಾ ಶಿರೂರ  ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. 

ಕಾನೂನು ಪ್ರಕಾರ ಅವಿಶ್ವಾಸ ನಿರ್ಣಯದ ನೋಟಿಸನ್ನು ಅಧ್ಯಕ್ಷರಿಗೆ ನೀಡಬೇಕಾಗಿದ್ದು, ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅವರ ಆಪ್ತ ಕಾರ್ಯದರ್ಶಿಗೆ ನೀಡಲಾಗಿದೆ.

ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?  

ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷೆ ಚೈತ್ರಾ ಶಿರೂರ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದು,  ಅಭಿವೃದ್ಧಿ ಕುಂಠಿತ ಗೊಂಡಿದ್ದರಿಂದ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದೆವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನೀಲ್ ಕುಮಾರ್ ಪಾಟೀಲ್ ತಿಳಿಸಿದ್ದಾರೆ.

click me!