ಬಂದ್ ದಿನ ಆಟೋ ಇರುತ್ತಾ? ಇಲ್ವಾ ? ಭುಗಿಲೆದ್ದ ವಿವಾದ

By Web DeskFirst Published Jan 7, 2019, 3:22 PM IST
Highlights

ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜನವರಿ 8 ಹಾಗೂ 9 ರಂದು ಭಾರತ್ ಬಂದ್ ಗೆ ಕರೆ ನೀಡಿದೆ. ಈ ಬಂದ್ ಗೆ ಆಟೋ ಚಾಲಕರು ಬೆಂಬಲ ನೀಡುವುದಿಲ್ಲ ಎಂದು ಆಟೋ ಯೂನಿಯನ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು :  ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿ ಯು) ಬಂದ್ ಕರೆ ನೀಡಿದೆ. ಇದರಿಂದ ಹಲವು ಸೇವೆಗಳಲ್ಲಿ ವ್ಯತ್ಯಯವಾಗಲಿದೆ. 

ಜನವರಿ 8 ಹಾಗೂ 9 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ಆಟೋ ಚಾಲಕರ ಯೂನಿಯನ್ ನಲ್ಲಿ ಮುಷ್ಕರಕ್ಕೆ ಬೆಂಬಲ ನೀಡಬೇಕೆ ಬೇಡವೇ ಎನ್ನುವ ವಿಚಾರವಾಗಿ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. 

ಕಾರ್ಮಿಕ ಸಂಘಟನೆಗಳ ಬೆಂಬಲಕ್ಕೆ ಆಟೋ ಚಾಲಕರ ಸಂಘ ಬೆಂಬಲ ಇಲ್ಲವೆಂದು ಬೆಂಗಳೂರು ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ

ನಾಳೆ ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ಇರುತ್ತಾ ರಜೆ..?

ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ಆಟೋಗಳಿದ್ದು, 80 ಸಾವಿರದಷ್ಟು ಆಟೋಗಳು ಪ್ರತಿನಿತ್ಯ ರಸ್ತೆಗಿಳಿಯುತ್ತವೆ. ಬೆಂಗಳೂರಿನಲ್ಲಿ ಸುಮಾರು 25 ಆಟೋ ಚಾಲಕರ ಯೂನಿಯನ್ ಗಳಿದ್ದು, ಇವರಲ್ಲಿ ಕೆಲವು ಸಂಘಟನೆಗಳಿಂದ ಬೆಂಬಲ ನೀಡುಬ ಬಗ್ಗೆ ಭಿನ್ನಾಭಿಪ್ರಾಯ ಎದುರಾಗಿದೆ.  ಇದರ ನಡುವೆಯೇ ಎಂದಿನಂತೆ ಆಟೋ ಸೇವೆ ಲಭ್ಯವಾಗಲಿದೆ ಎಂದು ಆಟೋ ಯೂನಿಯನ್ ಅಧ್ಯಕ್ಷರು ಹೇಳಿದ್ದಾರೆ.

ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?

ಇನ್ನು ಮುಷ್ಕರದಿಂದ ಆಟೋ ಚಾಲಕರಿಗೆ ನಷ್ಟವೇ ಹೊರತು ಲಾಭವಿಲ್ಲ.  ಬಂದ್ ನಿಂದ 2 ದಿನ ಸೇವೆ ಸ್ಥಗಿತ ಮಾಡಿದಲ್ಲಿ ದಿನದ ಬಾಡಿಗೆ ನಂಬಿರುವ ಚಾಲಕರಿಗೆ ಭಾರೀ ಹೊಡೆತ ಬೀಳಲಿದೆ ಹೀಗಾಗಿ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ. 

ಇನ್ನು ಬಂದ್ ನಿಂದಾಗಿ ಹಲವು ಸೇವೆಗಳು ವ್ಯತ್ಯಯವಾಗಲಿದ್ದು, ಈ ವೇಳೆ ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುವುದರ ವಿರುದ್ಧ ದೂರು ನೀಡಬಹುದು ಎಂದು ಮಂಜುನಾಥ್ ತಿಳಿಸಿದ್ದಾರೆ. 

ಈಗಾಗಲೇ ಖಾಸಗಿ ಬಸ್ ಸಂಘಟನೆ, ಓಲಾ ಕೂಡ ಎಂದಿನಂತೆ ಬಂದ್ ದಿನ ಸೇವೆ ಮುಂದುವರಿಸಲು ನಿರ್ಧರಿಸಿದ್ದಾರೆ. ಬಂದ್ ದಿನ ಆಟೋ ಸೇವೆಯೂ ಕೂಡ ಸಾರ್ವಜನಿಕರಿಗೆ ಲಭ್ಯವಾಗಲಿದೆ.

click me!