ಉಗ್ರ ದಮನಕ್ಕೆ ಸಾಕ್ಷಿ ಕೇಳಿದ ಸಿಧು, BSYರನ್ನು ಎಳೆದು ತಂದ್ರು!

By Web DeskFirst Published Mar 4, 2019, 8:38 PM IST
Highlights

ಪುಲ್ವಾಮಾ ದಾಳಿ ಬಗ್ಗೆ ಸಲ್ಲದ ಹೇಳಿಕೆ ನೀಡಿ ಸಾಕಷ್ಟು ಅನುಭವಿಸಿದ್ದರೂ ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ ನವಜೋತ್ ಸಿಂಗ್ ಸಿಧು ಮಾತ್ರ ಬದಲಾಗಿಲ್ಲ. 

ನವದೆಹಲಿ[ಮಾ. 04]  ನವಜೋತ್ ಸಿಂಗ್ ಸಿಧು ಮತ್ತೆ ವಿವಾದ ಎಬ್ಬಿಸುವ ಕೆಲಸ ಮಾಡಿದ್ದಾರೆ.  ವಾಯು ಸೇನೆ ಮುಖ್ಯಸ್ಥ ಮುಖ್ಯಸ್ಥ ಬಿ.ಎಸ್. ಧನೋವಾ ಮಾತನಾಡಿ ನಾವು ಎಷ್ಟು ಮಂದಿ ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂಬುದನ್ನು ಲೆಕ್ಕಕ್ಕೆ ಇಡುವ ಕೆಲಸ ಮಾಡುತ್ತಿಲ್ಲ ಎಂದಿದ್ದರು.

ಮಾಧ್ಯಮಗಳು ಸಹ 300 ಉಗ್ರರು ಹತರಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ್ದವು.  ಆದರೆ ಟ್ವೀಟ್ ಮಾಡಿರುವ ಕಾಂಗ್ರೆಸ್  ಮುಖಂಡ ನವಜೊತ್ ಸಿಂಗ್ ಸಿಧು 300 ಉಗ್ರರು ಮೃತಪಟ್ಟಿದ್ದಾರೆ, ಹೌದು ಅಥವಾ ಅಲ್ಲವೋ ? ಇದರ ಉದ್ದೇಶವೇನು ನೀವು   ನೆಲಸಮ ಮಾಡಿರುವುದು ಉಗ್ರರನ್ನೋ ಅಥವಾ ಮರಗಳನ್ನೋ? ಇದು ಚುನಾವಣಾ ಗಿಮಿಕ್ ಅಲ್ಲವೇ? ಸೈನ್ಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಿ ಎಂದಿದ್ದಾರೆ.

ಪಾಕ್ ಜತೆ ಶಾಂತಿ ಎಂದ ಸಿಧುಗೆ ಅಸೆಂಬ್ಲಿಯಲ್ಲೇ ಬಿತ್ತು ಗುದ್ದು!

ಟ್ವೀಟ್ ನಲ್ಲಿ ಯಡಿಯೂರಪ್ಪ, ಹಾಗೂ ಅಹ್ಲುವಾಲಿಯಾ ಹೇಳಿಕೆಯನ್ನು ಸಿಧು ಪ್ರಸ್ತಾಪಿಸಿದ್ದಾರೆ . ಪಾಜಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನಕ್ಕೆ ಸಿಧು ಹೋಗಿ ಬಂದಿದ್ದರು.

 

 

300 terrorist dead, Yes or No?

What was the purpose then? Were you uprooting terrorist or trees? Was it an election gimmick?

Deceit possesses our land in guise of fighting a foreign enemy.

Stop politicising the army, it is as sacred as the state.

ऊंची दुकान फीका पकवान| pic.twitter.com/HiPILADIuW

— Navjot Singh Sidhu (@sherryontopp)
click me!