
ಮಂಗಳೂರು(ಮಾ.04): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಮುಖಂಡರ ವಾಕ್ಸರ ತಾರಕಕ್ಕೇರಿದೆ. ಕಾಂಗ್ರೆಸ್‌ಗೆ ದೇಶದ ಚಿಂತೆ, ಬಿಜೆಪಿಗೆ ಸೀಟಿನ ಚಿಂತೆ ಎಂದಿದ್ದ ಕಾಂಗ್ರೆಸ್ ಸಚಿವ ಯು.ಟಿ ಖಾದರ್‌ಗೆ ಇದೀಗ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಅಟಲ್ ಸರ್ಕಾರದಲ್ಲಿ ಸಚಿವರಾಗಿದ್ದ ಧನಂಜಯ್ ಕುಮಾರ್ ವಿಧಿವಶ
ಬಿಜೆಪಿಗೆ ದೇಶ ಮತ್ತು ಸೈನಿಕರ ಚಿಂತೆಯಾದರೆ ಕಾಂಗ್ರೆಸ್‌ಗೆ ಭಯೋತ್ಪಾಕರ ಚಿಂತೆಯಾಗಿದೆ ಎಂದು ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಸದ್ಯ ಆಧಾರವಾಗಿರುವುದು ಉಗ್ರಗಾಮಿಗಳು, ಮಹಾಘಟಬಂಧನದ ನಾಯಕರು ಹಾಗೂ ಕೆಲ ಬುದ್ಧಿಜೀವಿಗಳು ಎಂದು ಶ್ರೀನಿವಾಸ್ ಪೂಜಾರಿ ಕಾಂಗ್ರೆಸ್ ವಿರುದ್ದ ಹರಿಹಾಯ್ದರು.
ಇದನ್ನೂ ಓದಿ: ಸರ್ಜಿಕಲ್ ದಾಳಿ ಸಾಕ್ಷ್ಯ ಕೇಳಿದ ಕಾಂಗ್ರೆಸ್‌ಗೆ ಮೋದಿ ಗುದ್ದು
ಉಗ್ರರ ವಿರುದ್ಧ ಸೈನಿಕರು ಹೋರಾಟ ನಡೆಸುತ್ತಿದ್ದಾರೆ. ಏರ್‌ಸ್ಟ್ರೈಕ್ ಮೂಲಕ ಭಯೋತ್ಪಾದಕರನ್ನ ಸದೆಬಡಿದಿದೆ. ಇದನ್ನ ಸಂಭ್ರಮಿಸಬೇಡಿ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಅನ್ಯಕೋಮಿಗೆ ನೋವಾಗುತ್ತೆ ಎಂದಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ, ಅವರ ಬಾಯಿಯಲ್ಲಿ ಈ ಮಾತು ಬರಬಾರದಿತ್ತು ಎಂದು ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.