ಮತ್ತೋರ್ವ ಮುಸ್ಲಿಂ ನಾಯಕ ಬಿಜೆಪಿಗೆ: ಮುಖಭಂಗ ‘ಕೈ’ಗೆ!

By Web DeskFirst Published Jul 8, 2019, 9:51 PM IST
Highlights

‘ಕೈ’ಬಿಟ್ಟು ಕಮಲ ಮುಡಿದ ಮತ್ತೋರ್ವ ಮುಸ್ಲಿಂ ಮುಖಂಡ| ರೋಷನ್ ಬೇಗ್ ಹಾದಿಯಲ್ಲಿ ಹಲವು ಮುಸ್ಲಿಂ ಮುಖಂಡರು| ಬಿಜೆಪಿ ಸೇರಿದ ಕಣಿವೆ ರಾಜ್ಯದ ಕಾಂಗ್ರೆಸ್ ನಾಯಕ ಮೊಹ್ಮದ್ ಇಕ್ಬಾಲ್ ಮಲ್ಲಿಕ್| ರಾಮ್ ಮಾಧವ್ ನೇತೃತ್ವದಲ್ಲಿ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ|

ಶ್ರೀನಗರ(ಜು.08): ಇತ್ತ ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್ಸಿಗ ರೋಷನ್ ಬೇಗ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರುವ ಸಾಧ್ಯತೆಗಳ ನಡುವೆಯೇ, ಅತ್ತ ಕಾಶ್ಮೀರದಲ್ಲೂ ಹಿರಿಯ ಕಾಂಗ್ರೆಸ್ಸಿಗ ಮೊಹ್ಮದ್ ಇಕ್ಬಾಲ್ ಮಲ್ಲಿಕ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇಕ್ಬಾಲ್ ಮಲ್ಲಿಕ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಪಕ್ಷಾಂತರ ಪರ್ವದ ಬಿಸಿ ಕಣಿವೆ ರಾಜ್ಯಕ್ಕೂ ತಟ್ಟಿದಂತಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಿಂದ ಪ್ರೇರಿತರಾಗಿ ತಾವು ಬಿಜೆಪಿ ಸೇರುತ್ತಿರುವುದಾಗಿ ಮಲಿಕ್ ಸ್ಪಷ್ಟಪಡಿಸಿದ್ದಾರೆ.

BJP National General Secretary Sh. , BJP State President Sh. and other senior party leaders welcome stalwart Congress leader from Darhal (Rajouri) Sh. Iqbal Malik along with his supporters into party fold at Party Headquarters, Trikuta Nagar, Jammu. pic.twitter.com/LJjqHcQwev

— BJP Jammu & Kashmir (@BJP4JnK)

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಅವರ ನೇತೃತ್ವದಲ್ಲಿ ಮಲಿಕ್ ಹಾಗೂ ಅವರ ಬೆಂಬಲಿಗರು ಬಿಜೆಪಿ ಸೇರಿದ್ದಾರೆ.

click me!