ಹಿರಿಯ ಕಾಂಗ್ರೆಸ್ ನಾಯಕರ ಪುತ್ರಿ ನೇಣಿಗೆ ಶರಣು

First Published Jun 4, 2018, 9:00 AM IST
Highlights

ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಕಳುಹಿಸಿಕೊಡಲು ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಪುತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಚರಂತಿಮಠ ಗಾರ್ಡನ್‌ನಲ್ಲಿ ಭಾನುವಾರ ಬೆಳಕಿಗೆ ಬಂದಿದೆ. 
 

ಧಾರವಾಡ: ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಕಳುಹಿಸಿಕೊಡಲು ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಪುತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿ ರುವ ಘಟನೆ ನಗರದ ಚರಂತಿಮಠ ಗಾರ್ಡನ್‌ನಲ್ಲಿ ಭಾನುವಾರ ಬೆಳಕಿಗೆ ಬಂದಿದೆ. 

ಕಾಂಗ್ರೆಸ್‌ನ ಹಿರಿಯ ಮುಖಂಡ ಶಿವಶಂಕರ್ ಹಂಪಣ್ಣವರ ಪುತ್ರಿ ಪೂರ್ಣಿಮಾ(21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ಪೂರ್ಣಿಮಾ ಅವರು, ದ್ವಿತೀಯ ವರ್ಷದ ವ್ಯಾಸಂಗವನ್ನು ಬೆಂಗಳೂರಿನಲ್ಲಿ ಮಾಡಲು ನಿರ್ಧರಿಸಿದ್ದರು. 

ಆದರೆ, ಮನೆಯವರಿಗೆ ಪ್ರೀತಿಪಾತ್ರರಾಗಿದ್ದ ಅವರನ್ನು ಅಷ್ಟು ದೂರ ಕಳುಹಿಸಿಕೊಡಲು ಕುಟುಂಬದವರು ಒಪ್ಪಿರ ಲಿಲ್ಲ. ಹಾಗಾಗಿ, ಹುಬ್ಬಳ್ಳಿಯಲ್ಲೇ ವ್ಯಾಸಂಗ ಮುಂದುವರೆಸುವಂತೆ ತಿಳಿಸಿದ್ದರು. ಇದರಿಂದ ನೊಂದ ಪೂರ್ಣಿಮಾ ರಾತ್ರಿ ಎಲ್ಲರೂ ಮಲಗಿದ ಮೇಲೆ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬೆಳಗ್ಗೆ 10 ಗಂಟೆಯಾದರೂ ಹೊರಬರದಿದ್ದಾಗ ಮನೆಯವರು ಬಾಗಿಲು ಒಡೆದು ನೋಡಿದ್ದಾರೆ. ಆಗ ಆತ್ಮಹತ್ಯೆ ಮಾಡಿ ಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!