ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ, ಬಿಜೆಪಿ ಸೇರ್ತಾರ ಬಿಸಿಸಿಐ ಅಧ್ಯಕ್ಷ?ಆ.24ರ ಟಾಪ್ 10 ಸುದ್ದಿ!

By Suvarna NewsFirst Published Aug 24, 2020, 4:46 PM IST
Highlights

ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ಹಿರಿಯ ಹಾಗೂ ಕಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಇದರ ನಡುವೆ ಕಾಂಗ್ರೆಸ್ ಅಧ್ಯಕ್ಷಗಾದಿ ರೇಸ್‌ನಲ್ಲಿ ಕರ್ನಾಟಕದ ರಾಜಕಾರಣಿಗಳು ಮುಂದಿದ್ದಾರೆ. ಡೋನಾಲ್ಡ್ ಟ್ರಂಪ್ ಚುನಾವಣೆ ಗೆಲ್ಲಲು ಮೋದಿ ಮೊರೆ ಹೋಗಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಬೇಟಿ ಮಾಡಿದ ಬಳಿಕ ಸೌರವ್ ಗಂಗೂಲಿ ರಾಜಕೀಯ ಸೇರಿಕೊಳ್ಳು ಮಾತುಗಳು ಕೇಳಿಬರುತ್ತಿದೆ. ಕೊಹ್ಲಿ ಸಚಿನ್‌ಗೆ ಬ್ಯಾಟ್‌ ರೆಡಿ ಮಾಡುತ್ತಿದ್ದಾತನ ನೇರವಿಗೆ ಬಂದ ಸೋನು ಸೂದ್, ಬರುತ್ತಿದೆ ಟಾಟಾ ಆ್ಯಪ್ ಸೇರಿದಂತೆ ಆಗಸ್ಟ್ 24ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ರಾಹುಲ್ ಮಾತಿನಿಂದ ಭುಗಿಲೆದ್ದ ಆಕ್ರೋಶ: ರಾಜೀನಾಮೆಗೆ ಮುಂದಾದ ಹಿರಿಯ ನಾಯಕ...

ಇಂದು (ಸೋಮವಾರ) ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ಹಾಗೂ ಕಿರಿಯ ನಾಯಕರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ರಾಹುಲ್ ಗಾಂಧಿ ಅವರ ಹೇಳಿಕೆಗೆ ಹಿರಿಯ ನಾಯಕರು ಬೇಸರಗೊಂಡಿದ್ದಾರೆ. 

ಸೇನೆ ಬಳಸಿ ಚೀನಾ ಗಡಿ ಖ್ಯಾತೆ ಬಗೆಹರಿಸಲು ಭಾರತ ಮುಕ್ತವಾಗಿದೆ: ತೀಕ್ಷ್ಣ ಎಚ್ಚರಿಕೆ ನೀಡಿದ CDS ರಾವತ್!...

ಕಳೆದ ಕೆಲ ತಿಂಗಳುಗಳಿಂದ ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆ ಉಲ್ಬಣಿಸುತ್ತಲೇ ಇದೆ. ಉಭಯ ದೇಶಗಳ ನಡುವಿನ ಸಂಘರ್ಷದ ಬಳಿಕ ನಿರಂತರವಾಗಿ ಮಾತುಕತೆ ನಡೆಯುತ್ತಿದ್ದು, ಚೀನಾ ಮಾತ್ರ ತನ್ನ ಮೊಂಡುತನದಿಂದ ಹಿಂದೆ ಸರಿದಿಲ್ಲ. ಇತ್ತ ಭಾರತ ಹಲವು ಎಚ್ಚರಿಕೆಗಳನ್ನು ಚೀನಾ ಗಂಭೀರವಾಗಿ ಪರಿಗಣಿಸಿಲ್ಲ. ಇದೀಗ ಭಾರತ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಆಡಿದ ಒಂದೇ ಮಾತು ಚೀನಾ ಮಾತ್ರವಲ್ಲ, ಪಾಕಿಸ್ತಾನ, ನೇಪಾಳ ಸೇರಿದಂತೆ ಭಾರತದ ಜೊತೆ ಗಡಿ ಹಂಚಿಕೊಂಡಿರುವ ದೇಶದಲ್ಲಿ ಆತಂಕ ತಂದಿದೆ.

ಗಾಂಧಿಯೇತರರಿಗೆ 'ಕೈ' ಪಟ್ಟ: ಅಧ್ಯಕ್ಷ ರೇಸ್‌ನಲ್ಲಿ ಖರ್ಗೆ ಹೆಸರು ಮುಂಚೂಣಿಯಲ್ಲಿ!...

ಕಾಂಗ್ರೆಸ್‌ ಪಾಳಯದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಒಂದೆಡೆ ಸೋನಿಯಾ ಗಾಂಧಿ ಅಧ್ಯಕ್ಷ ಗಾಧಿಯಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದರೆ, ಅತ್ತ ರಾಹುಲ್ ಗಾಂಧಿ ಕೂಡಾ ಈ ಪಟ್ಟಕ್ಕೇರಲು ಒಪ್ಪದಿದ್ದರೆ ಎಐಸಿಸಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಬಹುದೆಂಬ ಕುತೂಹಲ ಮನೆ ಮಾಡಿದೆ.

ಚುನಾವಣೆ ಗೆಲ್ಲಲು ಮೋದಿ ವಿಡಿಯೋಗೆ ಟ್ರಂಪ್‌ ಮೊರೆ!...

ಮುಂಬರುವ ಅಧ್ಯಕ್ಷೀಯ ಚುನಾವಣೆ ಗೆಲ್ಲಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಪ್ರಧಾನಿ ಮೋದಿ ಅವರ ‘ಮೊರೆ’ ಹೋಗಿದ್ದಾರೆ. ಮೋದಿ ಜೊತೆಗಿನ ಟ್ರಂಪ್‌ ಅವರ ಕೆಲ ವಿಡಿಯೋಗಳನ್ನು ಟ್ರಂಪ್‌ರ ಬಿಡುಗಡೆ ಮಾಡಿದೆ. ಈ ಮೂಲಕ 20 ಲಕ್ಷದಷ್ಟಿರುವ ಭಾರತೀಯರನ್ನು ಸೆಳೆಯುವ ಕೆಲಸ ಮಾಡಿದೆ.

ಕೊಹ್ಲಿ ಸಚಿನ್‌ಗೆ ಬ್ಯಾಟ್‌ ರೆಡಿ ಮಾಡುತ್ತಿದ್ದಾತನ ಸ್ಥಿತಿ ಗಂಭೀರ, ನೆರವಿಗೆ ಬಂದ ನಟ ಸೋನು ಸೂದ್..!

ಇದೀಗ ಸೋನು ಸೂದ್ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್‌ಗೆ ಬ್ಯಾಟ್‌ ತಯಾರು ಮಾಡಿಕೊಡುತ್ತಿದ್ದ ಅಶ್ರಫ್‌ ಚೌಧರಿ(ಅಶ್ರಫ್ ಬಾಯ್) ಅವರ ನೆರವಿಗೆ ಧಾವಿಸಿದ್ದಾರೆ.

ದೀದಿ ನೀಡಿದ್ದ ಜಮೀನು ವಾಪಾಸ್ ಕೊಟ್ಟ ದಾದ..! ಬಿಜೆಪಿ ಸೇರ್ತಾರ ಕೋಲ್ಕತಾ ಮಹರಾಜ..?

ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಇದೀಗ ಮತ್ತೊಮ್ಮೆ ಬಿಸಿಸಿಐ ಸುದ್ದಿಯಲ್ಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿದ ಬಳಿಕ ಸೌರವ್ ಗಂಗೂಲಿ ರಾಜಕೀಯ ಪ್ರವೇಶ ಮಾಡುತ್ತಾರಾ ಎನ್ನುವ ಕುರಿತಂತೆ ಚರ್ಚೆಗಳು ಆರಂಭವಾಗಿವೆ. 

'ಮಂದಣ್ಣ ಮನೆ ಕೋತಿ ದತ್ತು ಪಡೆಯಲು ಯಾರಿದ್ದೀರಾ?'; ರಶ್ಮಿಕಾ ಫೋಟೋ ವೈರಲ್!

ಸ್ಯಾಂಡಲ್‌ವುಡ್‌ ನಟಿ ರಶ್ಮಿಕಾ ಮಂದಣ್ಣ ತಮ್ಮ ಸೆಲ್ಫೀಗೆ 'ಮಂಕಿ' ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಮೆಜಾನ್, ರಿಲಯನ್ಸ್‌ಗೆ ಟಾಟಾ ಸಡ್ಡು, ಬರುತ್ತಿದೆ 'ಸೂಪರ್ ಆ್ಯಪ್'!...

Tata Group ನೂತನ ಸೂಪರ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸುವ ಹಂತದಲ್ಲಿದೆ. ಸ್ಮಾರ್ಟ್‌ಫೋನ್‌ನಲ್ಲಿ ಈ ಒಂದು ಆ್ಯಪ್‌ನಿಂದ ಅನೇಕ ಉತ್ಪನ್ನಗಳು ಹಾಗೂ ಸೇವೆಗಳು ಲಭ್ಯವಾಗಲಿದೆ. ಇನ್ನು Tata Group ಈ ಆ್ಯಪ್ 2021ರ ಆರಂಭದಲ್ಲಿ ಲಾಂಚ್ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಬಿಡುಗಡೆಗೊಳ್ಳಲಿರುವ ಈ ಆ್ಯಪ್ ಭಾರತದಲ್ಲಿ ಅಬಿವೃದ್ಧಿ ಕಾಣುತ್ತಿರುವ ರಿಲಯನ್ಸ್ ಹಾಗೂ ಅಮೆಜಾನ್ ಸಡ್ಡು ಹೊಡೆಯುವ ಅನುಮಾನ ವ್ಯಕ್ತವಾಗಿದೆ.

ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಸ್ಥಗಿತಗೊಂಡ 8 ಕಾರುಗಳು; ಇಲ್ಲಿದೆ ಕಾರಣ!

ಭಾರತದಲ್ಲಿನ ಆಟೋಮೇಕರ್ಸ್ ತಮ್ಮ ಹಲವು ಕಾರುಗಳನ್ನು ಸ್ಥಗಿತಗೊಳಿಸಿ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದ್ದಾರೆ. ಕೆಲ ಕಾರುಗಳು ಅಷ್ಟೇ ವೇಗದಲ್ಲಿ ಕಣ್ಣರೆಯಾಗಿವೆ. ಇನ್ನು ಕೆಲವು ಈಗಲೂ ಮಾರುಕಟ್ಟೆಯ ಅಗ್ರಜನಾಗಿ ಗುರುತಿಸಿಕೊಂಡಿದೆ. ಹೀಗೆ ಭಾರತದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದರೂ ಯಶಸ್ಸು ಸಿಗದೆ ಸ್ಥಗಿತಗೊಂಡ ಕಾರುಗಳ ವಿವರ ಇಲ್ಲಿದೆ.

23 ನಾಯಕರ ಪತ್ರ, ರಾಹುಲ್ ಗಾಂಧಿ ಅಸಮಾಧಾನ!...

23 ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದ ಬೆನ್ನಲ್ಲೇ ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಕಟ್ಟಲು ಸಿದ್ಧತೆ ನಡೆಯುತ್ತಿದೆ. ಹಿರಿಯ ನಾಯಕರೂ ಇದಕ್ಕಾಗಿ ಪಟ್ಟು ಹಿಡಿದಿದದ್ದು, ರಾಹುಲ್ ಮನವೊಲಿಸುವ ಯತ್ನ ನಡೆಯುತ್ತಿದೆ. 

click me!