ಡಿ.ಕೆ. ಶಿವಕುಮಾರ್​ ಒಬ್ಬ ದೊಡ್ಡ ಕಳ್ಳ ಎಂದ ಬಿಜೆಪಿ ಎಂಎಲ್‌ಸಿ

By Suvarna News  |  First Published Aug 24, 2020, 4:42 PM IST

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಎಂಎಲ್​ಸಿ ಸಿ.ಪಿ. ಯೋಗೇಶ್ವರ್ ಮಾತಿನ ಸಮರ ಮುಂದುವರಿಸಿದ್ದು, ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.


ಚನ್ನಪಟ್ಟಣ, (ಆ.24): ಡಿ.ಕೆ. ಶಿವಕುಮಾರ್​ ಒಬ್ಬ ದೊಡ್ಡ ಕಳ್ಳ. ಅವರ ಫೋನ್ ಕದ್ದಾಲಿಕೆ ಮಾಡಿ ನಮ್ಮ ಸರ್ಕಾರ ಯಾವ ರಾಜ್ಯ ಗೆಲ್ಲಬೇಕಾಗಿದೆ? ಎಂದು ಸಿ.ಪಿ. ಯೋಗೇಶ್ವರ್ ಕುಟುಕಿದ್ದಾರೆ.

ಇಂದು (ಸೋಮವಾರ) ಚನ್ನಪಟ್ಟಣದಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದ ಸಿಪಿವೈ, ಡಿಕೆಶಿ ಫೋನ್ ಟ್ಯಾಪಿಂಗ್ ಆರೋಪ ಮಾಡುತ್ತಿದ್ದಾರೆ. ಆದರೆ, ಅವರೇ ಒಬ್ಬ ಕಳ್ಳ. ಅವರು ಇನ್ನೊಬ್ಬರ ಮೇಲೆ ಆರೋಪ ಮಾಡೋಕೆ ಏನಿದೆ? ಫೋನ್ ಕದ್ದಾಲಿಕೆ ಆರೋಪ ಶುದ್ಧಸುಳ್ಳು. ಅವರ ಫೋನ್‍ನನ್ನು ಯಾವ ಉದ್ದೇಶಕ್ಕಾಗಿ ಕದ್ದಾಲಿಕೆ ಮಾಡಬೇಕು? ಅದರ ಅಗತ್ಯ ಏನಿದೆ? ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕಾಗಿದೆ? ಎಂದು ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದರು.

Tap to resize

Latest Videos

ಮತ್ತೆ ರಾಜ್ಯ ರಾಜ್ಯಕಾರಣದಲ್ಲಿ ಸದ್ದು ಮಾಡಿದ ಫೋನ್ ಟ್ಯಾಪ್

ಡಿಕೆಶಿ ಅವರೇ ಈ ಹಿಂದೆ ಫೋನ್ ಟ್ಯಾಪಿಂಗ್ ಮಾಡಿಸಿ, ಅದನ್ನು ನಮ್ಮ ಪಕ್ಷದ ಮೇಲೆ ಆರೋಪ ಹೊರಿಸಿದ್ದರು. ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಅವರು ಇಂತಹ ಆರೋಪ ಮಾಡುತ್ತಿದ್ದಾರೆ. ಫೋನ್​ ಕದ್ದಾಲಿಕೆ ಮಾಡುವುದರಲ್ಲಿ ಡಿಕೆಶಿ ಅನುಭವಿ ಎಂದು  ಟಾಂಗ್ ಕೊಟ್ಟರು.

ಇನ್ನು ನರೇಗಾ ಹಣವನ್ನು ಕನಕಪುರದವರು ಜಾಸ್ತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಮೂರು ತಾಲೂಕುಗಳಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಜಿಲ್ಲೆಯಲ್ಲಿ ಹಣವನ್ನು ಸಮಾನ ಹಂಚಿಕೆ ಮಾಡಬೇಕು. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಸಮಯಕ್ಕೆ ಸರಿಯಾಗಿ ಒಬ್ಬರು ಅಧಿಕಾರಿಗಳ ಸಭೆ ಕರೆಯುತ್ತಾರೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದಂತೆ, ಕನಕಪುರದವರು ಹಣ ಡ್ರಾ ಮಾಡಿಕೊಳ್ಳುತ್ತಾರೆ’ ಎಂದ ಯೋಗೇಶ್ವರ್​, ಸಂಸದ ಡಿ.ಕೆ.ಸುರೇಶ್​ ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

click me!