ಅನಾರೋಗ್ಯವೆಂದು ಆಸ್ಪತ್ರೆ ಸೇರಿದ್ದ ಕೈ ಶಾಸಕನ ಮೇಲೆ ತೂಗುಗತ್ತಿ

Published : Jul 24, 2019, 12:50 PM IST
ಅನಾರೋಗ್ಯವೆಂದು ಆಸ್ಪತ್ರೆ ಸೇರಿದ್ದ ಕೈ ಶಾಸಕನ ಮೇಲೆ ತೂಗುಗತ್ತಿ

ಸಾರಾಂಶ

ಅನಾರೋಗ್ಯವೆಂದು ಆಸ್ಪತ್ರೆಗೆ ಸೇರಿದ್ದ ಕಾಂಗ್ರೆಸ್ ಶಾಸಕನ ಮೇಲೆ ಕೈ ಪಡೆಯು ಹೊಸ ಅಸ್ತ್ರ ಪ್ರಯೋಗಿಸಿದೆ. ಇದೀಗ ಅವರ ಮೇಲೆ ತೂಗುಗತ್ತಿ ತೂಗುತ್ತಿದೆ. 

ಬೆಂಗಳೂರು [ಜು.24] : ಎದೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್  ಮೇಲೆ ಈಗ ಹೊಸ ತೂಗು ಗತ್ತಿ ತೂಗುತ್ತಿದೆ. 

ಅನಾರೋಗ್ಯದಿಂದ ಮುಂಬೈಗೆ ತೆರಳಿ ಅಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಮಂತ ಪಾಟೀಲ್ ವಿರುದ್ಧ ಕಾಂಗ್ರೆಸ್ ನಿಂದ ದೂರು ನೀಡಲಾಗಿದೆ.  

ವಿಶ್ವಾಸಮತ ಯಾಚನೆ ವೇಳೆ ಶ್ರೀಮಂತ ಪಾಟೀಲ್ ಗೈರಾಗಿದ್ದು, ಈ ನಿಟ್ಟಿನಲ್ಲಿ ಸ್ಪೀಕರ್ ರಮೇಶ್ ಕುಮಾರ್ ನೋಟಿಸ್ ಜಾರಿ ಮಾಡಿದ್ದಾರೆ. ಖುದ್ದಾಗಿ ಆಗಮಿಸಿ ಗೈರಾದ ಕಾರಣ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಖುದ್ದಾಗಿ ಆಗಮಿಸಲು ತಿಳಿಸಲಾಗಿದ್ದು, ಅವರು ಬರುತ್ತಾರೋ ಇಲ್ಲವೋ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಮೇಶ್ ಕುಮಾರ್ ಹೇಳಿದರು. 

ಇದುವರೆಗೂ ತಾವು ಮಾಡಿರುವ ಕೆಲಸ ಹೆಚ್ಚು ತೃಪ್ತಿ ತಂದಿದೆ. ಮುಂದಿನ ಎಲ್ಲಾ ನಡಾವಳಿಗಳು ರಾಜ್ಯಪಾಲರು ನೋಡಿಕೊಳ್ಳುತ್ತಾರೆ ಎಂದು ರಮೇಶ್ ಕುಮಾರ್ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka Heavy Rail Alert: ಕರಾವಳಿ ಮತ್ತು ಮಲೆನಾಡಿಗೆ ಹಳದಿ ಅಲರ್ಟ್, ಬೆಂಗಳೂರಿನಲ್ಲೂ ಮಳೆ ಆರ್ಭಟ!
ಬಾಗಲಕೋಟೆ, ಆಲಮಟ್ಟಿ, ವಿಜಯಪುರದಿಂದ ಕಾಶಿಗೆ ನೇರ ರೈಲು ಸಂಪರ್ಕ; ಎಲ್ಲೆಲ್ಲಿ ನಿಲುಗಡೆ?