ಯಡಿಯೂರಪ್ಪ ಪ್ರಮಾಣ ವಚನ: 2 ಮುಹೂರ್ತ ನೀಡಿದ ಜ್ಯೋತಿಷಿ

Published : Jul 24, 2019, 12:16 PM ISTUpdated : Jul 24, 2019, 12:23 PM IST
ಯಡಿಯೂರಪ್ಪ ಪ್ರಮಾಣ ವಚನ: 2 ಮುಹೂರ್ತ ನೀಡಿದ ಜ್ಯೋತಿಷಿ

ಸಾರಾಂಶ

ನೂತನ ಸರ್ಕಾರ ರಚನೆ ಮಾಡಲು ಬಿಜೆಪಿ ನಾಯಕರು ಸಿದ್ಧರಾಗಿದ್ದಾರೆ. ವಿಧಾನಸಭಾ ಚುನಾವಣೆ ನಡೆದ ಬಳಿಕ 2ನೇ ಬಾರಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ತಯಾರಿಯಲ್ಲಿದ್ದಾರೆ. ಇದಕ್ಕೆ 2 ಮುಹೂರ್ತ ಫಿಕ್ಸ್ ಆಗಿದೆ. 

ಬೆಂಗಳೂರು[ಜು.24]: ರಾಜ್ಯದಲ್ಲಿ ನಡೆದ ರಾಜಕೀಯ ವಿಪ್ಲವಕ್ಕೆ ವಿಶ್ವಾಸಮತ ಯಾಚನೆ ಮೂಲಕ ತೆರೆ ಎಳೆಯಲಾಗಿದೆ. ರಾಜಕಾರಣದಲ್ಲಿ ಹೊಸ ಚಟುವಟಿಕೆಗಳು ಆರಂಭವಾಗಿದ್ದು, ಬಿಜೆಪಿ ನಾಯಕರು ಅಧಿಕಾರ ಗದ್ದುಗೆಗೆ ಏರಲು ಸಿದ್ಧರಾಗಿದ್ದಾರೆ. 

2018ರ ವಿಧಾನಸಭಾ ಚುನಾವಣೆ ಬಳಿಕ ಎರಡನೇ ಬಾರಿ ಮುಖ್ಯಮಂತ್ರಿ ಗಾದಿಗೆ ಏರಲು ಯಡಿಯೂರಪ್ಪ ಸಿದ್ಧರಾಗಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು  ಮುಹೂರ್ತ ಫಿಕ್ಸ್ ಆಗಿವೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜ್ಯೋತಿಷಿಗಳು ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭವನ್ನು ನಡೆಸಲು 2 ಮುಹೂರ್ತ ನೀಡಿದ್ದಾರೆ. ಗುರುವಾರ ಮಧ್ಯಾಹ್ನ 3.28 ನಿಮಿಷದಿಂದ 3.48 ನಿಮಿಷದವರೆಗೆ ಒಂದು ಮುಹೂರ್ತ ನೀಡಲಾಗಿದೆ. 

ಇನ್ನೊಂದು ಮುಹೂರ್ತ ಶುಕ್ರವಾರ ನೀಡಲಾಗಿದ್ದು, ಸಂಜೆ ನಾಲ್ಕು ಗಂಟೆ ನೀಡಲಾಗಿದೆ. ಈ ಎರಡು ಸಮಯದಲ್ಲಿ ಯಡಿಯೂರಪ್ಪ ಯಾವ ಮುಹೂರ್ತದಲ್ಲಿ ಮುಖ್ಯಮಂತ್ರಿ ಗಾದಿಗೆ ಏರಲಿದ್ದಾರೆ ಎನ್ನುವುದು ಮಾತ್ರ ಇನ್ನೂ ಕನ್ಫರ್ಮ್ ಆಗಿಲ್ಲ. 

ಶನಿವಾರದ ಸುಳಿವು : ಆದರೆ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಮಾತ್ರ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ಶನಿವಾರ ನಡೆಯಬಹುದು ಎಂದು ಸುಳಿವು ನೀಡಿದ್ದಾರೆ. 

ಶಾಸಕಾಂಗ ಪಕ್ಷದ ಸಭೆ ನಡೆಸಬೇಕು. ಆ ನಂತರವಷ್ಟೆ ಪ್ರಮಾಣ ವಚನ ಸೇರಿದಂತೆ ಇನ್ನಿತರೆ ಎಲ್ಲ ವಿಚಾರಗಳೂ ನಿರ್ಧಾರ ಆಗಬೇಕು. ಇನ್ನು ಎರಡು ಮೂರು ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?