ರಾಜ್ಯದ 2 ಥಿಯೇಟರ್ ವಿರುದ್ಧ ಕಾಲಿವುಡ್ ದೂರು

By Web DeskFirst Published Oct 16, 2018, 8:57 AM IST
Highlights

ತಮಿಳು ಚಿತ್ರ ನಿರ್ಮಾಪಕರ ಸಂಘ ತಮಿಳುನಾಡಿನ ಮತ್ತು ಕರ್ನಾಟಕದ ಕೆಲವು  ಚಿತ್ರಮಂದಿರಗಳಲ್ಲಿ ತಮಿಳು ಚಿತ್ರಗಳ ಪೈರಸಿ ಆಗಿದೆ ಎಂದು ಆರೋಪಿಸಿ ಒಟ್ಟು ಹತ್ತು ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಬೆಂಗಳೂರು: ಪೈರಸಿ ವಿರುದ್ಧ ಸಮರ ಸಾರಿರುವ ತಮಿಳು ಚಿತ್ರ ನಿರ್ಮಾಪಕರ ಸಂಘ ತಮಿಳುನಾಡಿನ ಮತ್ತು ಕರ್ನಾಟಕದ ಕೆಲವು  ಚಿತ್ರಮಂದಿರಗಳಲ್ಲಿ ತಮಿಳು ಚಿತ್ರಗಳ ಪೈರಸಿ ಆಗಿದೆ ಎಂದು ಆರೋಪಿಸಿ ಒಟ್ಟು ಹತ್ತು ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಹತ್ತರಲ್ಲಿ ಎರಡು ಚಿತ್ರಮಂದಿರ ಕರ್ನಾಟಕಕ್ಕೆ ಸೇರಿವೆ. 

ಅದರಲ್ಲಿ ಒಂದು ಬೆಂಗಳೂರಿನ ಜಿಟಿ ವರ್ಲ್ಡ್ ಮಾಲ್ ನಲ್ಲಿರುವ ಸತ್ಯಂ ಸಿನಿಮಾಸ್, ಇನ್ನೊಂದು ಮಂಗಳೂರಿನ ಸಿನಿಪೊಲೀಸ್. ಸತ್ಯಂ ಸಿನಿಮಾಸ್ ನಲ್ಲಿ ನಯನತಾರಾ, ಅನುರಾಗ್ ಕಶ್ಯಪ್ ಅಭಿನಯದ ಇಮೈಕಾ ನೊಡಿಗಲ್ ಮತ್ತು ಸಿನಿಪೊಲೀಸ್‌ನಲ್ಲಿ ಶಿವಕಾರ್ತಿಕೇಯನ್, ಸಮಂತಾ ನಟಿಸಿರುವ ಸೀಮ ರಾಜ ಚಿತ್ರಗಳ ಪೈರಸಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಅಲ್ಲದೇ ಅ.17 ಮತ್ತು ಅ. 18ರಂದು ಸಿನಿಮಾ ಬಿಡುಗಡೆಗೊಳಿಸುತ್ತಿರುವ ಚಿತ್ರಗಳ ನಿರ್ಮಾಪಕರು ಪಟ್ಟಿ ಮಾಡಿರುವ ಈ ಹತ್ತು ಥಿಯೇಟರ್‌ಗಳಲ್ಲಿ ತಮ್ಮ ಚಿತ್ರವನ್ನು ಡುಗಡೆಗೊಳಿಸಬಾರದು ಎಂದು ಕ್ಯೂಬ್ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ವಿಶಾಲ್ ಅಧ್ಯಕ್ಷರಾಗಿರುವ ತಮಿಳು ಚಿತ್ರ ನಿರ್ಮಾಪಕರ ಸಂಘ ಪ್ರಕಟಣೆ ಹೊರಡಿಸಿದೆ.

click me!