ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಪತ್ನಿ ವಿರುದ್ಧ ದೂರು

Published : Jul 03, 2018, 12:19 PM IST
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಪತ್ನಿ ವಿರುದ್ಧ ದೂರು

ಸಾರಾಂಶ

ಗಾಯಕನ ತಂದೆ ಮೇಲೆ ಕಾಂಬ್ಳಿ ದಂಪತಿ ಹಲ್ಲೆ? ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ: ಕಾಂಬ್ಳಿ ಪ್ರತಿದೂರು

ಮುಂಬೈ: ಗಾಯಕ ಅಂಕಿತ್ ತಿವಾರಿ ತಂದೆ ಆರ್.ಕೆ. ತಿವಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತು ಪತ್ನಿ ಆ್ಯಂಡ್ರಿಯಾ ವಿರುದ್ಧ ಇಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಇದಕ್ಕೆ ಪ್ರತಿದೂರು ದಾಖಲಿಸಿರುವ ಕಾಂಬ್ಳಿ, ‘ಆರ್.ಕೆ.ತಿವಾರಿ ನನ್ನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಬ್ಳಿ, ‘ಮಾಲ್‌ನಲ್ಲಿ ಆರ್. ಕೆ.ತಿವಾರಿ ಅನುಚಿತವಾಗಿ ವರ್ತಿಸುವ ವೇಳೆಯೇ ಸಿಕ್ಕಿಬಿದ್ದರು. ಆಗ ನನ್ನ ಪತ್ನಿ ತಿವಾರಿಯನ್ನು ತಳ್ಳಿದರು. ಆಗ

ತಿವಾರಿ ಪಕ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳು ನನ್ನ ಪತ್ನಿ ಮೇಲೆ ಹಲ್ಲೆ ನಡೆಸಲು ಬಂದರು’ ಎಂದು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: 2018ರ ಪ್ರಕರಣದಲ್ಲಿ ಯುಟ್ಯೂಬರ್‌ ರಾಠಿಗೆ ದಿಲ್ಲಿ ಕೋರ್ಟ್‌ ಸಮನ್ಸ್‌
Karnataka News Live: ಕಾಂಗ್ರೆಸ್ಸಿನವರೇ ಸ್ಟಿಂಗ್ ಪರಿಣಿತರು: ಪ್ರತಾಪ್ ಸಿಂಹ ಟೀಕೆ