ಸರ್ಕಾರ ಐದು ವರ್ಷ ಇರುವುದು ಖಚಿತ : ಡಿಕೆಶಿ

By Web DeskFirst Published Aug 27, 2018, 11:55 AM IST
Highlights

ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸುವ ಮೂಲಕ ಬಿಜೆಪಿ ಜನರಲ್ಲಿ ಬಿಜೆಪಿ ಗೊಂದಲ ಮೂಡಿಸುತ್ತಿದೆ. ಆದರೆ ನಮ್ಮ ಸರ್ಕಾರ ಐದು ವರ್ಷಗಳನ್ನು ಪೂರೈಸಲಿದೆ ಎಂದು ಸಚಿವ ಡಿ.ಕೆಶಿವಕುಮಾರ್  ಹೇಳಿದ್ದಾರೆ. 

ಬೆಂಗಳೂರು : ಏಕಾಏಕಿ ಒಡೆಯಲು ನಮ್ಮ ಸರ್ಕಾರ ಮಡಿಕೆ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬೀಳಿಸುವ ಕೆಲಸ ಮಾಡುವುದಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಜನರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದೂ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೂವರೆ ವರ್ಷ ಸಿದ್ದರಾಮಯ್ಯ ಬೆನ್ನಿಗೆ ನಿಂತು ಗಟ್ಟಿಯಾಗಿ ಕೆಲಸ ಮಾಡಿದ್ದೇನೆ. 

ಪುನಃ ಐದು ವರ್ಷಕ್ಕೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲು ಪ್ರಯತ್ನ ಪಟ್ಟೆವು. ಆದರೆ ಸಾಧ್ಯವಾಗಲಿಲ್ಲ. ಇದೀಗ ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಕುಳಿತು ನಿರ್ಧಾರ ಮಾಡಿ ಸರ್ಕಾರ ರಚಿಸಿದ್ದೇವೆ. ಈ ಸರ್ಕಾರ 5 ವರ್ಷ ಇರುವುದು ಖಚಿತ ಎಂದರು. ಸಿದ್ದರಾಮಯ್ಯ ಅವರಿಗೆ ಪಕ್ಷ ಕಟ್ಟಬೇಕು ಎಂಬ ಆಸೆ, ಆಕಾಂಕ್ಷೆ ಇದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬಲು ಆ ರೀತಿ ಮಾತನಾಡಿದ್ದಾರೆ. ಬಿಜೆಪಿ ಅಂದುಕೊಂಡಂತೆ ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ರಚಿಸುವುದು ಸುಲಭವಲ್ಲ. ಬಿಜೆಪಿಯ ಸ್ನೇಹಿತರಿಗೂ ಸ್ವಲ್ಪ ತಾಳ್ಮೆ ಬೇಕು ಎಂದು ಕಿವಿಮಾತು ಹೇಳಿದರು. 

ಸಿದ್ದು ವಿದೇಶ ಪ್ರವಾಸಕ್ಕೆ ಸಮರ್ಥನೆ: ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಕೈಗೊಳ್ಳುತ್ತಿರುವ ವಿದೇಶ ಪ್ರವಾಸದ ಬಗ್ಗೆ ಮಾತ ನಾಡಿದ ಅವರು, ವಿದೇಶ ಪ್ರವಾಸ ಕೈಗೊಳ್ಳುವುದರಲ್ಲಿ ತಪ್ಪೇನು ಇಲ್ಲ. ನೆರೆ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನನಗೂ ಅಕ್ಕ ಸಮ್ಮೇಳನಕ್ಕೆ ಆಹ್ವಾನವಿತ್ತು. ಆದರೆ ಕಾರಣಾಂ ತರಗಳಿಂದ ಹೋಗುತ್ತಿಲ್ಲ. ಈ ಹಿಂದೆ ಮುಖ್ಯಮಂತ್ರಿ ಗಳೇ ಹೋಗಿದ್ದರು ಎಂದು ಸಮರ್ಥಿಸಿಕೊಂಡರು.

ಸುಗ್ರೀವಾಜ್ಞೆಗೆ ಭಿನ್ನಾಭಿ ಪ್ರಾಯವಿಲ್ಲ: ಲೇವಾದೇವಿದಾರರು, ಗಿರವಿದಾರರ ಬಳಿ ಜನರು ಮಾಡಿರುವ ಸಾಲವನ್ನು ಮನ್ನಾಗೊಳಿಸುವ ಸುಗ್ರೀವಾಜ್ಞೆಯನ್ನು ಶಿವಕುಮಾರ್ ಸಮರ್ಥಿಸಿಕೊಂ ಡರು. ಸರ್ಕಾರವು ಶೋಷಣೆಗೆ ಒಳಗಾಗುತ್ತಿರುವ ಬಹಳ ಜನ ಬಡವ ರನ್ನು ರಕ್ಷಣೆ ಮಾಡಬೇಕಿತ್ತು.

ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿ ಒಂದು ಭರವಸೆ ನೀಡಬೇಕಿತ್ತು. ಅಂತಹ ಬದ್ಧತೆಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ವ್ಯಾಪಕವಾಗಿ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿ ದ್ದೇವೆ. ಈ ವಿಚಾರದಲ್ಲಿ ಸಚಿವರ ನಡುವೆ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.

click me!