
ಡೆಹ್ರಾಡೂನ್(ಮಾ.22): ಬುರ್ಖಾ ಧರಿಸಿರುವ ಮಹಿಳೆಯರು ಸಹ ಮತ ಹಾಕಿದ್ದಾರೆ ಮರೆಯಬೇಡ. ಎಲ್ಲ ಧರ್ಮದವರನ್ನು ಗೌರವಿಸಬೇಕು, ಅವರ ಹೃದಯಗಳನ್ನು ಗೆಲ್ಲಬೇಕು...
ಇದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ, ಪ್ರಖರ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಶ್ತ್ ಅವರ ಮನದಾಳದ ಮಾತು.
ತಮ್ಮ ಪುತ್ರ ಸಿಎಂ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ 84 ವರ್ಷದ ಸಿಂಗ್, ತ್ರಿವಳಿ ತಲಾಕ್ ಸೇರಿದಂತೆ ವಿವಿಧ ವಿಷಯಗಳಲ್ಲಿ ತಮಗೆ ಸಹಾಯ ಮಾಡುತ್ತದೆ ಎನ್ನುವ ವಿಶ್ವಾಸದಿಂದ ಮುಸ್ಲಿಂ ಮಹಿಳೆಯರು ಸಹ ಬಿಜೆಪಿಗೆ ಮತ ನೀಡಿದ್ದಾರೆ. ಎಲ್ಲಾ ಧರ್ಮದವರೂ ಬಿಜೆಪಿಯನ್ನು ನಂಬಿದ್ದಾರೆ. ಆದಿತ್ಯನಾಥ್ ಅವರೆಲ್ಲರನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ ಎಂದಿದ್ದಾರೆ. ತಮ್ಮ ಮಗ ಹಿಂದ್ವುತದ ಪ್ರಚಾರಕ ಎಂಬ ಸುಳಿಯಿಂದ ಹೊರಬರಬೇಕು ಎಂದು ಆಶಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.