
ಚಾಮರಾಜನಗರ(ಏ.07): ಏಪ್ರಿಲ್ 9ರಂದು ನಡೆಯುವ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ.ಎರಡು ರಾಜಕೀಯ ಪಕ್ಷಗಳ ನಾಯಕರು ಒಬ್ಬರ ವಿರುದ್ಧ ಒಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಇಂದು ನಡೆದ ಅಂತಿಮ ಬಹಿರಂಗ ಪ್ರಚಾರ ಸಭೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮೇಲೆ ಹರಿಹಾಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಅವನ್ಯಾವನೋ ಪ್ರತಾಪ್ ಸಿಂಹ ಇದ್ದಾನೆ, ಗೀತಾ ಮಹಾದೇವ್ ಪ್ರಸಾದ್ಗೆ ಚುಚ್ಚಿ ಚುಚ್ಚಿ ಮಾತನಾಡ್ತಾನೆ. ಪ್ರತಾಪ್ ಸಿಂಹ ಮೋಸ್ಟ್ ಇಮ್‌ಮೆಚ್ಯೂರ್ಡ್ ಮ್ಯಾನ್. ಬಿಜೆಪಿಯವರಿಗೆ ನಿಜವಾಗಲೂ ಸಂಸ್ಕೃತಿ ಇದ್ಯಾ? ಇಂತಹವರಿಗೆ ನೀವು ಓಟ್ ಹಾಕಬೇಕಾ? ಎಂದು ವಾಗ್ದಾಳಿ ನಡೆಸಿದರು.
ಸೀರೆ,ಸೈಕಲ್ ಬಿಟ್ರೆ ಹೇಳಕ್ಕೆ ಯಡಿಯೂರಪ್ಪ ಬಳಿ ಬೇರೆ ಏನು ಇಲ್ಲ
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಮಾತಿನ ದಾಳಿ ನಡೆಸಿದ ಸಿಎಂ, ಯಡಿಯೂರಪ್ಪ ಬಳಿ ಸೀರೆ,ಸೈಕಲ್ ಬಿಟ್ರೆ ಬೇರೆ ಹೇಳೊಕೆ ಏನು ಇಲ್ಲ. ನಾನು ಸಿಎಂ ಆದ ಮೇಲೆ ಹಲವು ಭಾಗ್ಯಗಳನ್ನ ಕೊಟ್ಟಿದ್ದೇನೆ. ಅನ್ನಭಾಗ್ಯ, ಕ್ಷೀರಭಾಗ್ಯ, ಮೊಟ್ಟೆ ಭಾಗ್ಯ, ಬಿಸಿ ಊಟ ಹಲವನ್ನು ನೀಡಿದ್ದೇನೆ ಯಡಿಯೂರಪ್ಪನವರೇ ನೀವು ಏನಾದ್ರೂ ಮಾಡಿದ್ರಾ' ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.