ಅಧಿಕಾರಿ ಮೇಲೆ ಹಲ್ಲೆ: ಗಾಯಕ್ವಾಡ್ ಬೆಂಬಲಕ್ಕೆ ಬಂದ ಸರ್ಕಾರ; ನಿಷೇಧ ಹಿಂಪಡೆಯಲು ಆದೇಶ

By Suvarna Web DeskFirst Published Apr 7, 2017, 11:31 AM IST
Highlights

ಕೇಂದ್ರ ವಿಮಾನಯಾನ ಇಲಾಖೆಯು ಈ ಕುರಿತು ಏರ್ ಇಂಡಿಯಾ ವ್ಯವಸ್ಥಾಪನಾ ಮಂಡಳಿ ಜತೆ ಸಭೆ ನಡೆಸಿದ್ದು, ರವೀಂದ್ರ ಗಾಯಕ್ವಾಡ್ ಸಿಬ್ಬಂದಿಯ ಕ್ಷಮೆ ಯಾಚಿಸಬೇಕು ಎಂದು ಏರ್ ಇಂಡಿಯಾ ಪಟ್ಟುಹಿಡಿದಿದೆ. ಆದರೆ ಅದನ್ನು ಮಾನ್ಯ ಮಾಡದ ಸರ್ಕಾರ, ನಿಷೇಧ ಹಿಂಪಡೆಯುವಂತೆ ಏರ್ ಇಂಡಿಯಾಗೆ ಸೂಚಿಸಿದೆ.

ನವದೆಹಲಿ (ಏ.07): ಏರ್ ಇಂಡಿಯಾ ಅಧಿಕಾರಿ ಮೇಲೆ  ಹಲ್ಲೆ ನಡೆಸಿ ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್’ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಕೇಂದ್ರ ಸರ್ಕಾರ ಇಂದು ಗಾಯಕ್ವಾಡ್ ಬೆಂಬಲಕ್ಕೆ ಬಂದಿದ್ದು, ನಿಷೇಧವನ್ನು ಹಿಂಪಡೆಯಲು ಏರ್ ಇಂಡಿಯಾ ಸಂಸ್ಥೆಗೆ ಆದೇಶಿಸಿದೆ.

ಕೇಂದ್ರ ವಿಮಾನಯಾನ ಇಲಾಖೆಯು ಈ ಕುರಿತು ಏರ್ ಇಂಡಿಯಾ ವ್ಯವಸ್ಥಾಪನಾ ಮಂಡಳಿ ಜತೆ ಸಭೆ ನಡೆಸಿದ್ದು, ರವೀಂದ್ರ ಗಾಯಕ್ವಾಡ್ ಸಿಬ್ಬಂದಿಯ ಕ್ಷಮೆ ಯಾಚಿಸಬೇಕು ಎಂದು ಏರ್ ಇಂಡಿಯಾ ಪಟ್ಟುಹಿಡಿದಿದೆ. ಆದರೆ ಅದನ್ನು ಮಾನ್ಯ ಮಾಡದ ಸರ್ಕಾರ, ನಿಷೇಧ ಹಿಂಪಡೆಯುವಂತೆ ಏರ್ ಇಂಡಿಯಾಗೆ ಸೂಚಿಸಿದೆ.

ನಿನ್ನೆ ಸಚಿವ ಗಜಪತಿ ರಾಜು ಅವರಿಗೆ ಬರೆದಿರುವ ಪತ್ರದಲ್ಲಿ ರವೀಂದ್ರ ಗಾಯಕ್ವಾಡ್ ವಿಷಾದ ವ್ಯಕ್ತಪಡಿಸಿದ್ದರಲ್ಲದೇ ಇನ್ಮುಂದೆ ಅಂತಹ ಕೃತ್ಯ ಪುನರಾವರ್ತಿಸುವುದಿಲ್ಲವೆಂದು ಹೇಳಿದ್ದರು. ಏರ್ ಇಂಡಿಯಾ ನಿಷೇಧ ಹಿಂಪಡೆದ ಬೆನ್ನಲ್ಲಿ ಇತರ ವಿಮಾನಯಾನ ಸಂಸ್ಥೆಗಳು ಕೂಡಾ ನಿಷೇಧವನ್ನು ಹಿಂಪಡೆಯುವುದು ಎಂದು ಹೇಳಲಾಗಿದೆ.

click me!