
ಹಾವೇರಿ : ತಾಲೂಕಿನ ಅಸುಂಡಿಯಲ್ಲಿ ಮಂಗಳವಾರ ಕೆರೆ ತುಂಬಿಸುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ಭಾಷಣ ಮಾಡುತ್ತಿದ್ದಾಗ ಕೆಲವರು ವೇದಿಕೆ ಎದುರು ಬಂದು ಬ್ಯಾಡಗಿ ಕ್ಷೇತ್ರದಿಂದ ಎಸ್.ಆರ್. ಪಾಟೀಲರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಪ್ರಸಂಗ ನಡೆಯಿತು. ಈ ವೇಳೆ ಒಂದು ಹಂತದಲ್ಲಿ ಆಕ್ರೋಶಗೊಂಡ ಸಿದ್ದರಾಮಯ್ಯ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.
ಸಿಎಂ ಭಾಷಣ ಆರಂಭಿಸುತ್ತಿದ್ದಂತೆ ಕೆಲವರು ವೇದಿಕೆ ಹತ್ತಿರವೇ ಬಂದು ಏರು ಧ್ವನಿಯಲ್ಲಿ ಮಾತನಾಡಲು ಆರಂಭಿಸಿದರು. ಈ ಬಾರಿ ಬ್ಯಾಡಗಿ ಕ್ಷೇತ್ರದ ಅಭ್ಯರ್ಥಿ ಬದಲಾಗಬೇಕು. ಪಕ್ಷದ ಮುಖಂಡ ಎಸ್.ಆರ್. ಪಾಟೀಲ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಆಗ ಗರಂ ಆದ ಸಿದ್ದರಾಮಯ್ಯ, ಇವರು ಎಸ್.ಆರ್. ಪಾಟೀಲ ಕಡೆಯವರಾ ? ಏ ಪಾಟೀಲ, ಏನಿದು? ಅವರು ಕಾಂಗ್ರೆಸಿಗರಾಗಿ ಹೀಗೆ ಮಾಡುತ್ತಿದ್ದಾರಾ? ಟಿಕೆಟ್ ಬಗ್ಗೆ ಹೇಳೋಕೆ ಇದು ಸರ್ಕಾರಿ ಕಾರ್ಯಕ್ರಮ. ಅಷ್ಟೂಗೊತ್ತಾಗಲ್ವಾ ಎಂದು ಅಸಮಾಧಾನ ಹೊರಹಾಕಿದರು. ಆಗ ಪೊಲೀಸರು ಬಂದು ಪಾಟೀಲರ ಅಭಿಮಾನಿಗಳನ್ನು ದೂರಕ್ಕೆ ಕಳುಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.