
ದಾವಣಗೆರೆ: ಸರ್ಕಾರಿ ಸಮಾರಂಭದಲ್ಲಿ ನಾಡಗೀತೆ ಹಾಡುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಕೆ, ಎಲೆ ಹಾಕಿಕೊಂಡು ಮೆಲ್ಲುತ್ತಾ, ನಾಡಗೀತೆಗೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ,
ಹೈಸ್ಕೂಲ್ ಮೈದಾನದಲ್ಲಿ ನಿಗದಿತ ಸಮಯಕ್ಕಿಂತಲೂ ತಡವಾಗಿಯೇ ಆರಂಭಗೊಂಡ ವೇದಿಕೆಯನ್ನೇರಿದ ಸಿಎಂ ಸಿದ್ದರಾಮಯ್ಯ ಸಮಾರಂಭದ ಆರಂಭದಲ್ಲಿ ನಾಡಗೀತೆ ಹಾಡಲಾರಂಭಿಸಿದಾಗ ಎಲ್ಲರೂ ಎದ್ದು ನಿಂತರು. ಗೀತೆ ಕೇಳಿ ಬರುತ್ತಿದ್ದಾಗಲೇ ತಮ್ಮ ಪಂಚೆ ಸರಿ ಮಾಡಿಕೊಳ್ಳುತ್ತಾ, ದೇಹವನ್ನು ಅತ್ತಿಂದಿತ್ತ ಹೊರಳಿಸುತ್ತಿದ್ದರು. ಸಿಎಂ ಅವರ ಈ ವರ್ತನೆ ಸಾರ್ವಜನಿಕರ ವಲಯದಿಂದ ಬೇಸರದ ಮಾತುಗಳು ಕೇಳಿಬಂದಿವೆ.
ಇದೇವೇಳೆ ನಾಗಮಂಗಲದಲ್ಲಿ ಹರದನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಶಾಸಕ ಎನ್.ಚಲುವರಾಯಸ್ವಾಮಿ ನಾಡಗೀತೆಗೆ ಅವಮಾನ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.