
ಅಹಮದಾಬಾದ್: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ತನಿಖಾಧಿಕಾರಿಗಳು ಗೌಪ್ಯವಾಗಿ ವಿಚಾರಣೆ ನಡೆಸಿದ್ದರು ಎಂಬ ಕುತೂಲಕಾರಿ ವಿಷಯವನ್ನು ಪ್ರಕರಣದ ಆರೋಪಿ, ನಿವೃತ್ತ ಐಪಿಎಸ್ ಅಧಿಕಾರಿ ಡಿ.ಜಿ. ವಂಜಾರಾ ಬಹಿರಂಗಪಡಿಸಿದ್ದಾರೆ.
ಮೋದಿ ಗುಜರಾತ್ ಸಿಎಂ ಆಗಿದ್ದಾಗ ಈ ವಿಚಾರಣೆ ನಡೆದಿತ್ತು. ಆದರೆ ಪ್ರಕರಣದ ಕಡತದಲ್ಲಿ ಇಂತಹ ವಿಷಯ ದಾಖಲಿಸಿಲ್ಲ ಎಂದು ಅವರು ಹೇಳಿದ್ದಾರೆ. ವಿಶೇಷ ಸಿಬಿಐ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯೊಂದರಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಪ್ರಕರಣದ ಕಡತದಲ್ಲಿರುವ ಎಲ್ಲ ಅಂಶಗಳು ಮತ್ತು ದೋಷಾರೋಪ ಪಟ್ಟಿಸಂಪೂರ್ಣ ಸಂಯೋಜಿಸಲ್ಪಟ್ಟದ್ದು ಮತ್ತು ಸೃಷ್ಟಿಸಲ್ಪಟ್ಟದ್ದು. ಹೀಗಾಗಿ ಪ್ರಕರಣದ ಕಡತದಲ್ಲಿರುವ ಎಲ್ಲ ಅಂಶಗಳು ಸುಳ್ಳು ಮತ್ತು ಹೆಣೆಯಲ್ಪಟ್ಟಕಟ್ಟುಕತೆ.
ಅಲ್ಲದೆ, ಇದರಲ್ಲಿ ಅರ್ಜಿದಾರನಿಗೆ ಸಂಬಂಧಿಸಿದ ಯಾವುದೇ ವಿಚಾರಣಾರ್ಹ ಸಾಕ್ಷ್ಯಗಳಿಲ್ಲ ಎಂದು ವಂಜಾರಾ ಹೇಳಿದ್ದಾರೆ. ಪ್ರಕರಣದಿಂದ ಕೈಬಿಡುವಂತೆ ಕೋರಿದ ವಂಜಾರಾರ ಈ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯಿಸುವಂತೆ ಸಿಬಿಐಗೆ ವಿಶೇಷ ನ್ಯಾಯಮೂರ್ತಿ ಜೆ.ಕೆ. ಪಾಂಡ್ಯಾ ನೋಟಿಸ್ ಜಾರಿಗೊಳಿಸಿದ್ದಾರೆ.
2004 ಜೂ.15ರಂದು ಅಹಮದಾಬಾದ್ ಹೊರ ವಲಯದಲ್ಲಿ ಇಶ್ರತ್ ಜಹಾನ್ ಮತ್ತು ಇತರ ಕೆಲವರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದೊಂದು ನಕಲಿ ಎನ್‌ಕೌಂಟರ್ ಎಂಬ ಆಪಾದನೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.