ಬೆಳೆಗಳಿಗೆ ನೀರು :ಉಭಯ ಸದನಗಳಲ್ಲಿ ನಿರ್ಣಯ ಅಂಗೀಕಾರ

Published : Oct 03, 2016, 08:45 AM ISTUpdated : Apr 11, 2018, 12:36 PM IST
ಬೆಳೆಗಳಿಗೆ ನೀರು :ಉಭಯ ಸದನಗಳಲ್ಲಿ ನಿರ್ಣಯ ಅಂಗೀಕಾರ

ಸಾರಾಂಶ

ಕುಡಿಯುವ ನೀರಿನ ಹಕ್ಕು ಮೂಲಭೂತ ಹಕ್ಕು. ದೇಶದ ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕ ಹಕ್ಕು.

ಬೆಂಗಳೂರು(ಅ.3): ಕಾವೇರಿ ಪ್ರದೇಶದ ಜಲಾಶಯಗಳದ ನೀರನ್ನು ಕುಡಿಯುವುದರ ಜೊತೆ ರೈತರ ಬೆಳೆಗಳಿಗೂ ಹರಿಸಲು ಉಭಯ ಸದನಗಳಲ್ಲೂ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. ನಿರ್ಣಯ ಅಂಗೀಕರಿಸಿ ನಂತರ ಉಭಯ ಸದನಗಳನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಲಾಗಿದೆ.

ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಒಂದೆಡೆ ಕೋರ್ಟ್​ ಆದೇಶ, ಇನ್ನೊಂದು ಸದನ ನಿರ್ಣಯ ಜನರ ಭಾವನೆಗಳಿಗೆ ನಾವು ತಲೆ ಬಾಗುತ್ತೇವೆ ಎಂದು ತಿಳಿಸಿದರು.

23 ಟಿಎಂಸಿ ನೀರಿನಲ್ಲಿ ಯಾವುದೇ ರಾಜೀಯಾಗಲ್ಲ. ಕಾವೇರಿಕೊಳ್ಳದ ಪ್ರದೇಶಗಳಿಗೆ ನೀರು ಬೇಕು. ಕುಡಿಯುವ ನೀರಿಗೆ ಧಕ್ಕೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಡಿಸೆಂಬರ್​ರೊಳಗೆ 29 ಟಿಎಂಸಿ ನೀರು ಬರುವ ಸಾಧ್ಯತೆಯಿದೆ ಎಂದು  ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಸಿದರು.

ಅಕ್ಟೋಬರ್ 18ರಂದು ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಹಿಂದಿನ ಆದೇಶ ಪಾಲನೆಗೆ ಸೂಚನೆ ನೀಡಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಸಹ ನೀರು ಬಿಡುವಂತೆ ನನಗೆ ಹೇಳಿದರು. ರಾಜ್ಯದ ಜನರು ಬೈದರೂ ಪರವಾಗಿಲ್ಲ ಎಂದು ಆದೇಶ ಪಾಲಿಸಿದ್ದೇವೆ. ಈ ವರ್ಷ 53.2 ಟಿಎಂಸಿ ನೀರು ತಮಿಳುನಾಡಿಗೆ ಬಿಟ್ಟಿದ್ದೇವೆ. ರಾಜ್ಯದಲ್ಲಿ ಸಂಕಷ್ಟವಿದ್ದರೂ ತಮಿಳುನಾಡಿಗೆ 53.02 ಟಿಎಂಸಿ ನೀರು ಹರಿಸಲಾಗಿದೆ. ಎಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲೂ ನೀರು ಬಿಟ್ಟಿದ್ದೇವೆ ಎಂದು ತಿಳಿಸಿದರು.

ಮಳೆ ಕಡಿಮೆಯಿದ್ದರೂ ನೀರು ಬಿಟ್ಟಿದ್ದೇವೆ

ಕಾವೇರಿ ಐತೀರ್ಪಿನ ಪ್ರಕಾರ 192 ಟಿಎಂಸಿ ನೀರು ಬಿಡಬೇಕು. 2012-13 ಸಂಕಷ್ಟ ಸ್ಥಿತಿಯಲ್ಲಿ 100 ಟಿಎಂಸಿ ನೀರು ಬಿಟ್ಟಿದ್ದೇವೆ. 2014 -15ನೇ ಸಾಲಿನಲ್ಲಿ 229 ಟಿಎಂಸಿ ನೀರು ಬಿಟ್ಟಿದ್ದೇವೆ. 2015-16ನೇ ಸಾಲಿನಲ್ಲಿ 152 ಟಿಎಂಸಿ ನೀರು ಬಿಟ್ಟಿದೇವೆ. ಕಳೆದ ವರ್ಷ ರಾಜ್ಯದಲ್ಲಿ ಮಳೆ ಕಡಿಮೆಯಿದ್ದ ಕಾರಣ 152 ಟಿಎಂಸಿ ನೀರು ಬಿಟ್ಟಿದ್ದೇವೆ. ಕುಡಿಯುವ ನೀರಿನ ಹಕ್ಕು ಮೂಲಭೂತ ಹಕ್ಕು. ದೇಶದ ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕ ಹಕ್ಕು. ನಿರ್ಣಯದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!