
ಬೆಂಗಳೂರು(ಆ.04): ಕಳೆದ ಮೂರು ದಿನಗಳಿಂದ ಸಚಿವ ಡಿಕೆಶಿ ನಿವಾಸಗಳ ಮೇಲೆ ಐಟಿ ದಾಳಿ ನಡೆಸಿದ್ದು, ಡಿಕೆಶಿ ಸೇರಿದಂತೆ ಅವರ ಆಪ್ತರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ದಾಳಿಯ ಬಗ್ಗೆ ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ರೆಸಾರ್ಟ್ಗೆ ಹೋಗಿ ದಾಳಿ ಮಾಡಿದ್ದು ಸರಿಯಲ್ಲ. ನಾನು ಕೂಡಾ ಇಂತಹ ಐಟಿ ದಾಳಿಗಳನ್ನು ವಿರೋಧಿಸುವುದಿಲ್ಲ. ಆದರೆ ಡಿಕೆಶಿ ಮೇಲೆ ನಡೆದ ದಾಳಿಗೆ ಇದು ಸೂಕ್ತ ಸಮಯವಲ್ಲ. ಗುಜರಾತ್ ಶಾಸಕರು ರೆಸಾರ್ಟ್'ನಲ್ಲಿದ್ದ ಸಮಯದಲ್ಲೇ ಈ ದಾಳಿ ಏಕೆ ನಡೆಸಿದ್ದಾರೆ? ಈಗಲ್ ಟನ್ ರೆಸಾರ್ಟ್'ಗೆ ಹೋಗುವ ಅವಶ್ಯಕತೆ ಏನಿತ್ತು? ಇದರ ಹಿಂದೆ ಕೇಂದ್ರ ಸರ್ಕಾರ ಪಿತೂರಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದೇ ಮೊದಲ ಬಾರಿ ದಾಳಿ ಸಂದರ್ಭದಲ್ಲಿ ಸಿಆರ್'ಪಿ'ಎಫ್ ಪಡೆ ಬಂದಿದೆ, ಅಧಿಕಾರಿಗಳು ಅವರನ್ನೇಕೆ ಕರೆ ತಂದರು? ರಾಜ್ಯ ಪೊಲೀಸ್ ಪಡೆಯ ಸಹಾಯ ಪಡೆಯಬೇಕಿತ್ತು ಆದರೆ ಈ ಬಾರಿ ಸಿಆರ್'ಪಿಎಫ್ ಪಡೆಯನ್ನು ಕರೆತಂದಿದ್ದಾರೆ. ದಾಳಿ ನೆಪದಲ್ಲಿ ಐಟಿ ಅಧಿಕಾರಿಗಳು ಗುಜರಾತ್ ಶಾಸಕರಿಗೆ ಅಮಿಷ ಒಡ್ಡಿದ್ದಾರೆ.
ಇನ್ನು ಅನಂತ್ ಕುಮಾರ್ ಬಿಜೆಪಿಯ ಹಲವಾರು ನಾಯಕರ ಮೇಲೆ ಭ್ರಷ್ಟಾಚಾರ ಆರೋಪ ಇದೆ. ಇಂಥವರು ಡಿಕೆಶಿ ರಾಜಿನಾಮೆ ಕೇಳೋಕೆ ನೈತಿಕತೆ ಇಲ್ಲ. ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.