ಬೆಂಗಳೂರು: 40 ಸಾವಿರ ಮಂದಿಯ ಆಧಾರ್ ಮಾಹಿತಿ ಕಳವು

Published : Aug 04, 2017, 11:10 AM ISTUpdated : Apr 11, 2018, 12:50 PM IST
ಬೆಂಗಳೂರು: 40 ಸಾವಿರ ಮಂದಿಯ ಆಧಾರ್ ಮಾಹಿತಿ ಕಳವು

ಸಾರಾಂಶ

ಆಧಾರ್ ಮಾಹಿತಿಯನ್ನು ಕಳುವು ಮಾಡಿದ ಆರೋಪದಲ್ಲಿ ಬೆಂಗಳೂರು ಪೊಲೀಸರು ಸಾಫ್ಟ್’ವೇರ್ ಇಂಜಿನಿಯರ್’ನನ್ನು ಬಂಧಿಸಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆ ಐಐಟಿ ಖರಗ್’ಪುರದಿಂದ ಪದವಿ ಪಡೆದು ಹಾಲಿ ಓಲಾ ಕ್ಯಾಬ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅಭಿನವ್ ಬಂಧಿತ ಆರೋಪಿಯಾಗಿದ್ದಾನೆ.

ಬೆಂಗಳೂರು: ಆಧಾರ್ ಮಾಹಿತಿಯನ್ನು ಕಳುವು ಮಾಡಿದ ಆರೋಪದಲ್ಲಿ ಬೆಂಗಳೂರು ಪೊಲೀಸರು ಸಾಫ್ಟ್’ವೇರ್ ಇಂಜಿನಿಯರ್’ನನ್ನು ಬಂಧಿಸಿದ್ದಾರೆ.

ದೇಶದ ಪ್ರತಿಷ್ಠಿತ ಸಂಸ್ಥೆ ಐಐಟಿ ಖರಗ್’ಪುರದಿಂದ ಪದವಿ ಪಡೆದು ಹಾಲಿ ಓಲಾ ಕ್ಯಾಬ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅಭಿನವ್ ಬಂಧಿತ ಆರೋಪಿಯಾಗಿದ್ದಾನೆ.

ಅಭಿನವ ಶ್ರೀವಾಸ್ತವ್ ಆಧಾರ್ ಸರ್ವರ್’ನ್ನು ಹ್ಯಾಕ್ ಮಾಡಿ ಮಾಹಿತಿ ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಧಾರ್ ಸರ್ವರ್ ಹ್ಯಾಕ್ ಮಾಡಿದ ಬಳಿಕ ಸುಮಾರು 40 ಸಾವಿರ ಮಂದಿಯ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಲಿಂಗ ಹಾಗೂ ಪ್ರಾಯ ಮುಂತಾದ ವೈಯುಕ್ತಿಕ ವಿವರಗಳನ್ನು ಕಳವು ಮಾಡಿದ್ದಾನೆನ್ನಲಾಗಿದೆ.  ಆದರೆ ಆಧಾರ್ ಕಾರ್ಡ್ ಬಳಕೆದಾರರ ಬಯೋಮೆಟ್ರಿಕ್  ಮಾಹತಿ ಕಳವಾಗಿಲ್ಲವೆನ್ನಲಾಗಿದೆ.

ಕೇಂದ್ರ ಸರ್ಕಾರದ ಅಧೀನ ಸಂಸ್ಥೆ  ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC)ಯು ಅಭಿವೃದ್ಧಿಪಡಿಸಿರುವ ಇ-ಹಾಸ್ಪಿಟಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ಅಭಿನವ್ ಶ್ರೀವಾಸ್ತವ್ ಮಾಹಿತಿಗಳನ್ನು ಕಳವು ಮಾಡುತ್ತಿದ್ದನು ಎನ್ನಲಾಗಿದೆ. ಇ—ಹಾಸ್ಪಿಟಲ್ ಅಪ್ಲಿಕೇಶನ್ ಅಧಾರ್ ವಿವರಗಳನ್ನೊಳಗೊಂಡಿದೆ, ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿನವ ಶ್ರೀವಾಸ್ತವನನ್ನು 10 ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಧಾರ್ ಸರ್ವರನ್ನು ಹೇಗೆ  ಹ್ಯಾಕ್ ಮಾಡಲಾಗಿದೆ ಎಂಬಿತ್ಯಾದಿ ವಿವರಗಳನ್ನು ತನಿಖೆಯಿಂದ ಹೊರಬರುವುದೆಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಮೇಲೆ ಅಮೆರಿಕ ಹೇರಿದ 25% ತೆರಿಗೆ ರದ್ದು? ದಾಳಿ ನಡೆಸಿದ್ರೆ ಯುದ್ದ ಎಂದು ಪರಿಗಣನೆ: ಇರಾನ್‌ ಗುಡಗು
ಪಾಂಡವಪುರ: ತೊಣ್ಣೂರು ಕೆರೆಯಲ್ಲಿ ಮೀನು ಹಿಡಿಯಲು ಪರವಾನಿಗೆ ನೀಡುವಂತೆ ಮೀನುಗಾರರ ಒತ್ತಾಯ