ಸಂಪುಟದಲ್ಲಿ 23 ಕೋಟ್ಯಧಿಪತಿಗಳು, ಸಿಎಂ ಬಳಿ 510 ಕೋಟಿ ರೂ. ಆಸ್ತಿ

Published : Jun 26, 2019, 08:03 PM ISTUpdated : Jun 26, 2019, 08:10 PM IST
ಸಂಪುಟದಲ್ಲಿ 23 ಕೋಟ್ಯಧಿಪತಿಗಳು, ಸಿಎಂ ಬಳಿ 510 ಕೋಟಿ ರೂ. ಆಸ್ತಿ

ಸಾರಾಂಶ

ಈ ಮುಖ್ಯಮಂತ್ರಿ ಶ್ರೀಮಂತ ಸಿಎಂ. ಬರೋಬ್ಬರಿ 510 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಯಾವ ರಾಜ್ಯದ ಮುಖ್ಯಮಂತ್ರಿ ಎಂದುಕೊಳ್ಳುತ್ತಿದ್ದೀರಾ?

ಹೈದರಾಬಾದ್[ಜೂ. 26] ಆಂಧ್ರ ಪ್ರದೇಶದ 17 ಜನ ನೂತನ ಸಚಿವರು ತಮ್ಮ ಮೇಲೆ ಇರುವ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. 26 ಸಚಿವರ ಪೈಕಿ 23 ಜನ ಕೋಟ್ಯಧಿಪತಿಗಳು. ಇದರಲ್ಲಿ 9 ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಆರೋಪಗಳಿವೆ. ಸರಾಸರಿ ಲೆಕ್ಕದಲ್ಲಿ ಪ್ರತಿಯೊಬ್ಬ ಸಚಿವರು 32.25 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಆಂಧ್ರದ ಸಿಎಂ ವೈ ಎಸ್ ಜಗನ್ ಮೋಗನ್ ರೆಡ್ಡಿ 510.38 ಕೋಟಿ ರೂ. ಆಸ್ತಿ ಹೊಂದಿದ್ದು ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗರು. ಪೆಡ್ಡಿ ರೆಡ್ಡಿ ರಾಮಚಂದ್ರ ರೆಡ್ಡಿ 130 ಕೋಟಿ ರೂ. ಮೇಕ್ ಪರಿ ಗೌತಮ್ ರೆಡ್ಡಿ 61 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಜಗನ್ ಬಳಿ 443 ಕೋಟಿ ಚರಾಸ್ತಿ ಇದ್ದರೆ , 66 ಕೋಟಿ ರೂ. ಸ್ಥಿರಾಸ್ತಿ ಇದೆ.

ಆಂಧ್ರ ಸರಕಾರದಿಂದ ಪೊಲೀಸರಿಗೆ ಭರ್ಜರಿ ಕೊಡುಗೆ

12 ಜನ ಅಂದರೆ ಶೆ. 46 ರಷ್ಟು ಸಚಿವರ ವಯಸ್ಸು 31 ರಿಂದ 50 ರ ಮಧ್ಯದಲ್ಲಿದೆ.  ಇನ್ನು ಶೇ. 54 ರಷ್ಟು ಸಚಿವರ ವಯಸ್ಸು 51 ರಿಂದ 70 ವರ್ಷದ ನಡುವೆ ಇದೆ. ಮೂವರು ಸಚಿವೆಯರು ಇದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ, ಶಾಗೇ ಹೆದರದೆ ಜೈಲಿಗೆ ಹೋಗಿದ್ದೆ, ಯಾರಿಗೂ ಜಗ್ಗಲ್ಲ: ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ಮುಂದುವರಿದ ಸಿಎಂ ಕುರ್ಚಿ ಕಿಚ್ಚು.. ಜ.6ಕ್ಕೆ ಡಿಕೆಶಿ ಮುಖ್ಯಮಂತ್ರಿ: ಮತ್ತೆ ಆಪ್ತರ 'ಬಾಂಬ್‌'!