ಸಾಲಗಾರರ ವಶದಲ್ಲಿದ್ದ ಕೊಳಗೇರಿ ಮಹಿಳೆ ಮನೆ ಬಿಡಿಸಿಕೊಟ್ಟ ಸಿಎಂ

By Web DeskFirst Published Sep 6, 2018, 11:38 AM IST
Highlights

ಕೊಳಗೇರಿ ಮಹಿಳೆಯೊಬ್ಬರ ಸಾಲದ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದ್ದಾರೆ. ಗಿರಿನಗರದ ಚಾಮುಂಡಿ ಕೊಳಗೇರಿ ನಿವಾಸಿ ಕನ್ನಿಯಮ್ಮ ಎಂಬುವರೇ ಸಮಸ್ಯೆ ಮುಕ್ತರಾಗಿದ್ದು, ಅವರಿಂದ ಸಾಲಗಾ ರರು ವಶಡಿಸಿಕೊಂಡಿದ್ದ ಮನೆಯನ್ನು ಪೊಲೀಸರು ಬಿಡಿಸಿ ಕೊಟ್ಟಿದ್ದಾರೆ. 

ಬೆಂಗಳೂರು: ತಮಗೆ ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಿದ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಫ್ಲ್ಯಾಟ್ ವಿವಾದ ಬಗೆಹರಿಸಿದ ಬೆನ್ನಲೆ ಮುಖ್ಯಮಂತ್ರಿಗಳು, ಇದೀಗ ಕೊಳಗೇರಿ ಮಹಿಳೆಯೊಬ್ಬರ ಸಾಲದ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದ್ದಾರೆ. ಗಿರಿನಗರದ ಚಾಮುಂಡಿ ಕೊಳಗೇರಿ ನಿವಾಸಿ ಕನ್ನಿಯಮ್ಮ ಎಂಬುವರೇ ಸಮಸ್ಯೆ ಮುಕ್ತರಾಗಿದ್ದು, ಅವರಿಂದ ಸಾಲಗಾ ರರು ವಶಡಿಸಿಕೊಂಡಿದ್ದ ಮನೆಯನ್ನು ಪೊಲೀಸರು ಬಿಡಿಸಿ ಕೊಟ್ಟಿದ್ದಾರೆ. 

ಬುಧವಾರ ತಮ್ಮ ಗೃಹ ಕಚೇರಿಯಲ್ಲಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕನ್ನಿಯಮ್ಮ ಅವರಿಗೆ ಮನೆ ದಾಖಲೆ ಪತ್ರಗಳನ್ನು ಕುಮಾರಸ್ವಾಮಿ ಹಸ್ತಾಂತರಿಸಿದರು. ಕೆಲ ತಿಂಗಳ ಹಿಂದೆ ಗಿರಿನಗರದ ಈಶ್ವರ್ ಎಂಬುವರಿಂದ 1.75 ಲಕ್ಷ ಸಾಲವನ್ನು ಕನ್ನಿಯಮ್ಮ ಪತಿ ನಾಗರಾಜು ಪಡೆದಿದ್ದರು. ಮನೆಗೆಲಸ ಮಾಡುವ ಕನ್ನಿಯಮ್ಮ, ತಾವು ಕಷ್ಟಪಟ್ಟ ದುಡಿದು ಸಾಲಗಾರರಿಗೆ ಹಣ ಮರಳಿಸಿದ್ದರು. ಆದರೆ ತನಗೆ ಸಕಾಲಕ್ಕೆ ಸಾಲ ಮರಳಿಸಲಿಲ್ಲ ಎಂದು ಹೇಳಿ ಕನ್ನಿಯಮ್ಮ ದಂಪತಿ ಮೇಲೆ ಗಲಾಟೆ ಮಾಡಿದ್ದಈಶ್ವರ್, ಆ ಕುಟುಂಬವನ್ನು ಮನೆಯಿಂದ ಹೊರದಬ್ಬಿದ್ದ.

ಬಳಿಕ ಕನ್ನಿಯಮ್ಮ ಮನೆಯನ್ನು ಮತ್ತೊಬ್ಬರಿಗೆ ಆತ ಬಾಡಿಗೆ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಸೆ. 1 ರಂದು ಜನತಾ ದರ್ಶನದಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರಿಗೆ ಕನ್ನಿಯಮ್ಮ ಅಹವಾಲು ಸಲ್ಲಿಸಿದ್ದರು. ಈ ಮನವಿಗೆ ಕೂಡಲೇ ಸ್ಪಂದಿಸಿದ ಮುಖ್ಯ
ಮಂತ್ರಿಗಳು, ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರಿಗೆ ಕರೆ ಮಾಡಿ ಕನ್ನಿಯಮ್ಮಳಿಗೆ ರಕ್ಷಣೆ ಕಲ್ಪಿಸುವಂತೆ ಸೂಚಿಸಿದರು. ಅಲ್ಲದೆ, ತಕ್ಷಣವೇ ಫೈನಾಶ್ಷಿಯರ್ ವಶಕ್ಕೆ ಪಡೆದಿರುವ ಮನೆಯನ್ನು ಮರಳಿ ದೂರುದಾರರಿಗೆ ಕೊಡಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶಿಸಿದ್ದರು. ಈ ಸೂಚನೆ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಈಶ್ವರ್ ಅವರನ್ನು ಗಿರಿನಗರ ಠಾಣೆಗೆ ಕರೆಸಿ ಕನ್ನಿಯಮ್ಮ ಸಾಲದ ಕುರಿತು ವಿಚಾರಿಸಿದರು. ಆಗ ತನಗೆ ಸಾಲ ಮರಳಿಸದ ಕಾರಣಕ್ಕೆ ಮನೆಗೆ ಬೀಗ ಹಾಕಿರುವುದಾಗಿ ಆತ ಹೇಳಿದ.

 ಆಗ ಪೊಲೀಸರು, ಕನ್ನಿಯಮ್ಮ ಅವರಿಗೆ ಮನೆ ಮರಳಿಸಬೇಕು ಹಾಗೂ ಸಾಲದ ವಿಚಾರದಲ್ಲಿ ತೊಂದರೆ ಕೊಡಬಾರದು ಎಂದು ತಾಕೀತು ಮಾಡಿದ್ದರು. ಇದೇ ಜನತಾ ದರ್ಶನದಲ್ಲಿ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ವಂದನಾ ಅವರು, ವಿಕೆಸಿ ರಿಯಲ್ ಎಸ್ಟೇಟ್ ಸಂಸ್ಥೆ ವಿರುದ್ಧ ಹಣ ಪಡೆದು ಫ್ಲ್ಯಾಟ್ ನೋಂದಣಿ ಮಾಡಿಸಿಕೊಡದೆ ತೊಂದರೆ ಕೊಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿದ್ದರು. ಈ ದೂರಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, 24 ತಾಸಿನಲ್ಲಿ ವಂದನಾ ಹೆಸರಿಗೆ ಫ್ಲ್ಯಾಟ್ ನೋಂದಣಿ ಆಗುವಂತೆ ಮಾಡಿದ್ದರು.

click me!