ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮೋಡ ಬಿತ್ತನೆ

Published : Sep 13, 2017, 05:42 PM ISTUpdated : Apr 11, 2018, 12:41 PM IST
ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಮೋಡ ಬಿತ್ತನೆ

ಸಾರಾಂಶ

ಮೋಡಬಿತ್ತನೆಯ ಹತ್ತನೇ ದಿನವಾದ ಮಂಗಳವಾರವೂ ಎರಡು ವಿಮಾನಗಳು ಕಾರ್ಯಾಚರಣೆ ನಡೆಸಿದ್ದು ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮೋಡಬಿತ್ತನೆ ಮಾಡಿವೆ.

ಹುಬ್ಬಳ್ಳಿ: ಮೋಡಬಿತ್ತನೆಯ ಹತ್ತನೇ ದಿನವಾದ ಮಂಗಳವಾರವೂ ಎರಡು ವಿಮಾನಗಳು ಕಾರ್ಯಾಚರಣೆ ನಡೆಸಿದ್ದು ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮೋಡಬಿತ್ತನೆ ಮಾಡಿವೆ.

ಹುಬ್ಬಳ್ಳಿ ನಿಲ್ದಾಣದಿಂದ ಮೊದಲ ವಿಮಾನ ಸಂಜೆ 4 ಗಂಟೆಗೆ ಹಾಗೂ ಎರಡನೇ ವಿಮಾನ 4.31ಕ್ಕೆ ಹಾರಾಟ ಪ್ರಾರಂಭಿಸಿದವು. ಮೊದಲನೇ ವಿಮಾನ ಬೆಳಗಾವಿ ಜಿಲ್ಲೆಯ ಬೆಳಗಾವಿ, ಗೋಕಾಕ, ಖಾನಾಪುರ, ಸವದತ್ತಿ, ಕಿತ್ತೂರು ತಾಲೂಕುಗಳಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 16 ಫ್ಲಯರ್ಸ್ ಉರಿಸಿ, ಸಂಜೆ 6 ಗಂಟೆಗೆ ಮರಳಿತು.

2ನೇ ವಿಮಾನ ಧಾರವಾಡ, ಉತ್ತರಕನ್ನಡ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ತನ್ನ ಕಾರ್ಯಚರಣೆ ನಡೆಸಿ, ಒಟ್ಟು 12 ಫ್ಲಯರ್ಸ್ ಉರಿಸಿ, ಸಂಜೆ 6.36ಕ್ಕೆ ಮರಳಿತು. ಮೋಡಬಿತ್ತನೆ ನಡೆಸಿದ ಬೆಳಗಾವಿ, ಖಾನಾಪುರ, ಬೈಲಹೊಂಗಲ, ಕಿತ್ತೂರು, ಸವದತ್ತಿ, ಗೋಕಾಕ್, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ, ಯಲ್ಲಾಪುರ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸುತ್ತಮುತ್ತ ಮಳೆಯಾಗಿದೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಶ್ಲೀಲ ಕಂಟೆಂಟ್: ಎಕ್ಸ್‌ಗೆ ಕೇಂದ್ರದಿಂದ ನೋಟಿಸ್, 72 ಗಂಟೆಯೊಳಗೆ ಉತ್ತರಿಸಲು ಸೂಚನೆ
ಚುನಾವಣೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಅಬ್ಬರ! ಮತದಾನಕ್ಕೆ ಮೊದಲೇ 66 ಸ್ಥಾನಗಳು ಮೈತ್ರಿ ಪಾಲಿಗೆ!