ಇನ್ನು ನಿತ್ಯ 3 ಸೇನಾ ಮುಖ್ಯಸ್ಥರ ಜೊತೆ ಸಚಿವೆ ನಿರ್ಮಲಾ ಸಭೆ

By Suvarna Web DeskFirst Published Sep 13, 2017, 5:22 PM IST
Highlights

ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಮತ್ತು ಸೇನೆಯ ವಿವಿಧ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ವೇಗ ನೀಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇನೆಯ ಮೂವರು ಮುಖ್ಯಸ್ಥರನ್ನು ಪ್ರತಿದಿನವೂ ಭೇಟಿ ಮಾಡಲು ನಿರ್ಧರಿಸಿದ್ದಾರೆ.

ನವದೆಹಲಿ: ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಮತ್ತು ಸೇನೆಯ ವಿವಿಧ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ವೇಗ ನೀಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇನೆಯ ಮೂವರು ಮುಖ್ಯಸ್ಥರನ್ನು ಪ್ರತಿದಿನವೂ ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಸೇನಾ ಸಿದ್ಧತೆಯ ಪರಿಶೀಲನೆ ಮತ್ತು ಕಾರ್ಯತಂತ್ರ ರೂಪಿಸುವ ನಿಟ್ಟಿನಿಂದ ಮೂವರು ಸೇನಾ ಮುಖ್ಯಸ್ಥರೊಂದಿಗೆ ಸಭೆ ಆಯೋಜಿಸಲಾಗಿದೆ.

ರಕ್ಷಣಾ ಕಾರ್ಯದರ್ಶಿಗಳೂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ರಕ್ಷಣಾ ಖರೀದಿ ಮಂಡಳಿ ಶಸ್ತ್ರಾಸ್ತ್ರ ಖರೀದಿಗೆ ವೇಗ ನೀಡಲು 15 ದಿನಕ್ಕೊಮ್ಮೆ ಸಭೆ ನಡೆಸಲಿದೆ.

click me!