
ಬೆಂಗಳೂರು(ನ. 08): ಮಾಸ್ತಿಗುಡಿ ಶೂಟಿಂಗ್ ವೇಳೆ ಹೆಲಿಕಾಪ್ಟರ್'ನಿಂದ ನೀರಿಗೆ ಜಂಪ್ ಮಾಡುವ ಪ್ರಯತ್ನದಲ್ಲಿ ನೀರು ಪಾಲಾದ ಇಬ್ಬರು ನಟರ ಶವ ಇನ್ನೂ ಪತ್ತೆಯಾಗಿಲ್ಲ. ನಿನ್ನೆಯಿಂದಲೂ ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ. ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ ಹಾಗೂ ರೋಬೋ ಮಂಜುನಾಥ್ ಅವರ ತಂಡವೂ ಕೂಡ ಹುಡುಕಾಟದಲ್ಲಿ ನಿರತವಾಗಿವೆ. 26 ಮಂದಿ ನುರಿತ ಈಜುತಜ್ಞರು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಜಲಾಶಯದ ನೀರಿನಲ್ಲಿ ರೋಬೋ ಮಂಜುನಾಥ್ ಅವರ ಕೈಗೆ ಬಟ್ಟೆ ಸಿಕ್ಕಿವೆ. ಆದರೆ, ನೀರಿನ ಹೂಳಿನಲ್ಲಿ ಆ ಬಟ್ಟೆ ಸಿಲುಕಿರುವುದರಿಂದ ಎಳೆಯಲು ಸಾಧ್ಯವಾಗುತ್ತಿಲ್ಲ. ಆ ಬಟ್ಟೆಯು ಮೃತ ನಟರಿಗೆ ಸೇರಿದ್ದಾ ಎಂಬುದೂ ಖಚಿತವಾಗಿಲ್ಲ.
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೂಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಘವ್ ಉದಯ್ ಮತ್ತು ಅನಿಲ್ ಕುಮಾರ್ ಅವರ ಶವಗಳು ಕೆಳಗೆಯೇ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿನ್ನೆ ಮಾಸ್ತಿಗುಡಿ ಸಿನಿಮಾದ ದೃಶ್ಯವೊಂದರ ಚಿತ್ರೀಕರಣದಲ್ಲಿ ಹೆಲಿಕಾಪ್ಟರ್'ನಿಂದ ಉದಯ್, ಅನಿಲ್ ಜೊತೆ ದುನಿಯಾ ವಿಜಿ ಕೂಡ ಜಂಪ್ ಮಾಡಿದ್ದರು. ಆದರೆ, ದುನಿಯಾ ವಿಜಿಯವರು ಲೈಫ್ ಜಾಕೆಟ್ ಧರಿಸಿದ್ದರಿಂದ ಬಚಾವ್ ಆದರು. ಲೈಫ್ ಬೋಟ್ ಹಾಗೂ ತೆಪ್ಪಗಳು ಸಮೀಪದಲ್ಲಿರದೇ ದಡದಲ್ಲಿದ್ದುದ್ದರಿಂದ ಉದಯ್ ಮತ್ತು ಅನಿಲ್ ಅವರನ್ನ ರಕ್ಷಿಸಲು ಸಾಧ್ಯವಾಗಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.