ನಿಮಗೆ ತಿಳಿದಿರಲೇಬೇಕಾದ ನೋಟಿನ ಕತೆ

By Suvarna Web DeskFirst Published Nov 8, 2016, 5:39 AM IST
Highlights

ಕಪ್ಪು ಹಣ ಹಾಗೂ ನಕಲಿ ನೋಟುಗಳ ಹಾವಳಿ ತಡೆಯುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

ಹಾಲಿ ಇರುವ ರೂ.500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸರ್ಕಾರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ರದ್ದು ಮಾಡಿದೆ. ಕಪ್ಪು ಹಣ ಹಾಗೂ ನಕಲಿ ನೋಟುಗಳ ಹಾವಳಿ ತಡೆಯುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

ಭಾರತದ ಕರೆನ್ಸಿ ಅಂಕಿ-ಸಂಖ್ಯೆ:

ಈಗ ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಮೌಲ್ಯ 16,41,500 ಲಕ್ಷ ಕೋಟಿ.

ಈ ಪೈಕಿ 500 ಮತ್ತು 1000 ನೋಟುಗಳ ಪ್ರಮಾಣ ಶೇ.86 ರಷ್ಟಿದೆ.

ಒಂದು ವೇಳೆ 500, 1000 ನೋಟು ರದ್ದು ಮಾಡಿದರೆ, 130 ಕೋಟಿ ಜನರು ಈಗ ಚಲಾವಣೆಯಲ್ಲಿರುವ ಒಟ್ಟು ಮೊತ್ತದ ಶೇ.14ರಷ್ಟು ಮೌಲ್ಯದ ಹಣವನ್ನೇ ಅವಲಂಬಿಸಬೇಕು.

ಸಾವಿರ ರುಪಾಯಿ ಒಂದು ನೋಟು ಮುದ್ರಿಸಲು 3 ರೂಪಾಯಿ ವೆಚ್ಚವಾಗುತ್ತದೆ.

ದೇಶದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ 16,41,50000000000000000

ಸ್ವಾತಂತ್ರ್ಯಾಪೂರ್ವದಲ್ಲಿ 1938 ರಲ್ಲಿ 10,000 ನೋಟು ಚಲಾವಣೆಗೆ ತಂದು 1946ರಲ್ಲಿ ಹಿಂಪಡೆಯಲಾಗಿತ್ತು

1954ರಲ್ಲಿ ಮತ್ತೆ 10,000 ನೋಟು ಚಲಾವಣೆಗೆ ತಂದು 1978ರಲ್ಲಿ ಹಿಂದಕ್ಕೆ ಪಡೆಯಲಾಗಿತ್ತು.

ಸದ್ಯಕ್ಕೆ ಚಲಾವಣೆಗೆ ಬರುತ್ತದೆ ಎನ್ನಲಾಗುತ್ತಿರುವ 2000 ನೋಟೇ ಅತಿ ಗರಿಷ್ಠ ಮೊತ್ತದ್ದಾಗಿದೆ.

ಈಗ 500, 1000 ರದ್ದು ಮಾಡಿರುವುದರಿಂದ 100 ರುಪಾಯಿಯೇ ಗರಿಷ್ಠ ಮೊತ್ತದ್ದಾಗಿದೆ.

ಕಡಿಮೆ ಮೊತ್ತದ ನೋಟು ಮುದ್ರಿಸಿದಷ್ಟೂ ಮುದ್ರಣವೆಚ್ಚ ಹೆಚ್ಚುತ್ತದೆ.

.

 

click me!