ಸೈಕಲ್’ನಲ್ಲೇ ಮೊಬೈಲ್ ಚಾರ್ಜರ್! ಮೂರನೇ ತರಗತಿ ವಿದ್ಯಾರ್ಥಿಗಳ ಸಂಶೋಧನೆ

By Suvarna Web DeskFirst Published Mar 9, 2017, 3:33 PM IST
Highlights

ಜಾರ್ಖಂಡ್ ರಾಜ್ಯದ ರಾಮಗಢದಲ್ಲಿರುವ ಮೌಂಟ್ ಎವರೆಸ್ಟ್ ಶಾಲೆಯ ವಿದ್ಯಾರ್ಥಿಗಳು ವಿದ್ಯುತ್ ಇಲ್ಲದೇ ಮೊಬೈಲ್ ಚಾರ್ಜ್ ಮಾಡಬಹುದಾದಂತಹ ಚಾರ್ಜರನ್ನು ಸಿದ್ಧಪಡಿಸಿದ್ದಾರೆ.

ಕಾರಿನಲ್ಲಿ ಮೊಬೈಲ್ ಚಾರ್ಜರ್ ಇರುವುದು ಸಾಮಾನ್ಯ, ಆದರೆ ಸೈಕಲ್’ನಲ್ಲಿ ಮೊಬೈಲ್ ಚಾರ್ಜ್ ಮಾಡುವುದನ್ನು ನೋಡಿದ್ದೀರಾ? ಅಂತಹದ್ದೊಂದು ಮೊಬೈಲ್ ಚಾರ್ಜರನ್ನು 3ನೇ ತರಗತಿಯ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ ಎಂದರೆ ನೀವು ನಂಬಲೇಬೇಕು.

ಜಾರ್ಖಂಡ್ ರಾಜ್ಯದ ರಾಮಗಢದಲ್ಲಿರುವ ಮೌಂಟ್ ಎವರೆಸ್ಟ್ ಶಾಲೆಯ ವಿದ್ಯಾರ್ಥಿಗಳು ವಿದ್ಯುತ್ ಇಲ್ಲದೇ ಮೊಬೈಲ್ ಚಾರ್ಜ್ ಮಾಡಬಹುದಾದಂತಹ ಚಾರ್ಜರನ್ನು ಸಿದ್ಧಪಡಿಸಿದ್ದಾರೆ.

ಸೈಕಲಿನ ಚಕ್ರವನ್ನು ವೇಗವಾಗಿ ತಿರುಗಿಸಿದಾಗ ಉತ್ಪಾದನೆಯಾಗುವ ಯಾಂತ್ರಿಕ ಶಕ್ತಿಯನ್ನು ವಿದ್ಯಾರ್ಥಿಗಳು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿದ್ದಾರೆ, ಆ ಮೂಲಕ ಉತ್ಪಾದನೆಯಾಗುವ ವಿದ್ಯುತ್’ನಿಂದ ಬಲ್ಬ್’ಗಳನ್ನು ಕೂಡಾ ಬೆಳಗಿಸಬಹುದು.  ಈ ಶಾಲೆಯ ಇತರ ವಿದ್ಯಾರ್ಥಿಗಳು ಕೂಡಾ ಇಂತಹ ಹಲವಾರು ನೂತನ ಅವಿಷ್ಕಾರಗಳನ್ನು ಮಾಡುವ ಮೂಲಕ ತಮ್ಮ ಕಿರಿಯ ವಯಸ್ಸಿನಲ್ಲೇ ರಾಜ್ಯದ ಗಮನ ಸೆಳೆದಿದ್ದಾರೆ.

click me!