
ಅಹಮದಾಬಾದ್: ಕೆಮಿಸ್ಟ್ರಿ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ತಪ್ಪು ಉತ್ತರ ಬರೆಯೋದು ಸಾಮಾನ್ಯ. ಹಾಗೇನೆ ಉತ್ತರ ಗೊತ್ತಾಗ್ತಿಲ್ಲವೆಂದು ಪ್ರಶ್ನೆಯನ್ನೇ ಬಿಟ್ಟುಬಿಡುವುದು ಕೂಡಾ ಸಾಮಾನ್ಯ. ಹಾಗದರೆ ಈ ಗುಜರಾತಿನ ಆನಂದ್ ಜಿಲ್ಲೆಯ ಬೋರ್ಸದ್ ಎಂಬಲ್ಲಿನ 12ನೇ ತರಗತಿ ವಿದ್ಯಾರ್ಥಿಗೇನಾಯಿತೋ ಗೊತ್ತಿಲ್ಲ, ಉತ್ತರ ಪತ್ರಿಕೆಯಲ್ಲಿ ಬರೆದಿರುವುದನ್ನು ನೋಡಿ ಶಿಕ್ಷಕರೇ ಅಘಾತಕ್ಕೊಳಗಾಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ, ಮೌಲ್ಯಮಾಪನ ಮಾಡುತ್ತಿದ್ದ ಮಹಿಳಾ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆ ನೋಡಿ ದಂಗಾಗಿದ್ದಾರೆ. ಕಾರಣ ಆತ ಬರೆದಿರುವ ಉತ್ತರ ಅಕ್ಷರಶ ಪೋರ್ನ್ ಲೇಖನವಾಗಿತ್ತು. ಅದರಲ್ಲಿ ಆತ ಸಿನೆಮಾ ನಟಿಯಾಗಿರುವ ತನ್ನ ಅತ್ತಿಗೆ ಹಾಗೂ ಅಡುಗೆಯವನ ನಡುವಿನ ಕಾಲ್ಪನಿಕ ಕಾಮಕೇಳಿಯನ್ನು ಬರೆದಿದ್ದಾನೆ. ಶಿಕ್ಷಕಿ ಕೂಡಲೇ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಈ ತರಹ ಅಸಂಬದ್ಧ ಉತ್ತರಗಳನ್ನು ಬರೆಯುವ ಅಭ್ಯರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅವಕಾಶವಿದ್ದು, ಆತನನ್ನು ಪರೀಕ್ಷಾ ಸುಧಾರಣಾ ಸಮಿತಿಯ ಮುಂದೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ಆ ವಿದ್ಯಾರ್ಥಿ ಹಾಜರಾಗಲಿಲ್ಲ ಎನ್ನಲಾಗಿದೆ.
ಆ ವಿದ್ಯಾರ್ಥಿಯ ಫಲಿತಾಂಶಗಳನ್ನು ರದ್ದುಪಡಿಸಲು ಹಾಗೂ ಇನ್ನೊಂದು ವರ್ಷ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಂತೆ ಹಿರಿಯ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ. ಆತನ ಪೋಷಕರ ಗಮನಕ್ಕೆ ಈ ವಿಷಯ ತರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.