ಡಿಜಿಟಲ್ ಲವ್ ಸ್ಟೋರಿ: ಮಿಸ್ಡ್ ಕಾಲ್ ಕೊಟ್ಟ ವಿವಾಹಿತ ಮಹಿಳೆಯ ಮೇಲಾಯ್ತು ಪ್ರೀತಿ, ಈಗ ಮದುವೆ!

Published : Jun 12, 2017, 03:45 PM ISTUpdated : Apr 11, 2018, 12:41 PM IST
ಡಿಜಿಟಲ್ ಲವ್ ಸ್ಟೋರಿ: ಮಿಸ್ಡ್ ಕಾಲ್ ಕೊಟ್ಟ ವಿವಾಹಿತ ಮಹಿಳೆಯ ಮೇಲಾಯ್ತು ಪ್ರೀತಿ, ಈಗ ಮದುವೆ!

ಸಾರಾಂಶ

ಇತ್ತೀಚೆಗೆ ವಿಶ್ವದಾದ್ಯಂತ ಡಿಜಿಟಲ್ ಇಂಡಿಯಾದ ಮಾತುಗಳೇ ಕೇಳಿ ಬರುತ್ತಿವೆ. ಇದೇ ಮಾತುಗಳ ನಡುವೆ ಬಿಹಾರದ 'ಡಿಜಿಟಲ್ ಲವ್ ಸ್ಟೋರಿ' ಒಂದು ಬೆಳಕಿಗೆ ಬಂದಿದೆ. ಇಲ್ಲಿ ಮಿಸ್ಡ್ ಕಾಲ್ ಮೂಲಕ ಆರಂಭವಾದ ಪ್ರೀತಿ ಇದೀಗ ಮದುವೆವರೆಗೆ ತಲುಪಿದೆ. ಕತಿಹಾರ್ ಜಿಲ್ಲೆಯ ನಿವಾಸಿ 45 ವರ್ಷದ ಸಲೋನಿಗೆ 41ರ ಹರೆಯದ ರಾಜೇಶ್ ಮೇಲೆ ಪ್ರೇಮಾಂಕುರವಾಗಿದೆ. ಇದೀಗ ಇಬ್ಬರೂ ಮದುವೆಯಾಗಿ ಖುಷಿಯಾಗಿದ್ದಾರೆ. ಇನ್ನು ಈ ಮದುವೆಯ ವಿಶೇಷವೆಂದರೆ ಸಲೋನಿ ಬಿಹಾರ ಮೂಲದವಳು ಹಾಗೂ ವರ ಜಾರ್ಖಂಡ್ ನಿವಾಸಿಯಾಗಿದ್ದಾನೆ. ಸದ್ಯ ಇವರ ಸ್ಟೋರಿ 'ಡಿಜಿಟಲ್ ಲವ್ ಸ್ಟೋರಿ' ಎಂದೇ ಫೇಮಸ್ ಆಗಿದೆ.

ಬಿಹಾರ(ಜೂ.12): ಇತ್ತೀಚೆಗೆ ವಿಶ್ವದಾದ್ಯಂತ ಡಿಜಿಟಲ್ ಇಂಡಿಯಾದ ಮಾತುಗಳೇ ಕೇಳಿ ಬರುತ್ತಿವೆ. ಇದೇ ಮಾತುಗಳ ನಡುವೆ ಬಿಹಾರದ 'ಡಿಜಿಟಲ್ ಲವ್ ಸ್ಟೋರಿ' ಒಂದು ಬೆಳಕಿಗೆ ಬಂದಿದೆ. ಇಲ್ಲಿ ಮಿಸ್ಡ್ ಕಾಲ್ ಮೂಲಕ ಆರಂಭವಾದ ಪ್ರೀತಿ ಇದೀಗ ಮದುವೆವರೆಗೆ ತಲುಪಿದೆ. ಕತಿಹಾರ್ ಜಿಲ್ಲೆಯ ನಿವಾಸಿ 45 ವರ್ಷದ ಸಲೋನಿಗೆ 41ರ ಹರೆಯದ ರಾಜೇಶ್ ಮೇಲೆ ಪ್ರೇಮಾಂಕುರವಾಗಿದೆ. ಇದೀಗ ಇಬ್ಬರೂ ಮದುವೆಯಾಗಿ ಖುಷಿಯಾಗಿದ್ದಾರೆ. ಇನ್ನು ಈ ಮದುವೆಯ ವಿಶೇಷವೆಂದರೆ ಸಲೋನಿ ಬಿಹಾರ ಮೂಲದವಳು ಹಾಗೂ ವರ ಜಾರ್ಖಂಡ್ ನಿವಾಸಿಯಾಗಿದ್ದಾನೆ. ಸದ್ಯ ಇವರ ಸ್ಟೋರಿ 'ಡಿಜಿಟಲ್ ಲವ್ ಸ್ಟೋರಿ' ಎಂದೇ ಫೇಮಸ್ ಆಗಿದೆ.

ಮಿಸ್ಡ್ ಕಾಲ್ ಲವ್ ಆರಂಭವಾಗಿದ್ದು ಹೇಗೆ?

ತಮ್ಮ ಪ್ರೀತಿಯ ವಿಚಾರವಾಗಿ ಮಾತನಾಡಿರುವ ಸಲೋನಿ ಡಿಜಿಟಲ್ ಲವ್ ಸ್ಟೋರಿ ಹುಟ್ಟಿಕೊಂಡ ಪ್ರಸಂಗವನ್ನು ಮಾಧ್ಯಮಗಳೆದುರು ಬಿಚ್ಚಿಟ್ಟಿದ್ದಾರೆ. 'ಒಂದು ದಿನ ತನ್ನ ಸಂಬಂಧಿಕರಿಗೆ ಕರೆ ಮಾಡುವ ಸಂದರ್ಭದಲ್ಲಿ ರಾಂಗ್ ನಂಬರ್'ಗೆ ಕರೆ ಕನೆಕ್ಟ್ ಆಗಿದೆ. ರಾಜೇಶ್ ಧ್ವನಿ ಕೇಳಿ ತಾನು ರಾಂಗ್ ನಂಬರ್'ಗೆ ಕರೆ ಮಾಡಿರುವುದನ್ನು ಅರಿತ ಸಲೋನಿ ಆಕೂಡಲೇ ಕರೆ ಕಟ್ ಮಾಡಿದ್ದಾಳೆ. ಆದರೆ ಅತ್ತ ರಾಜೇಶ್ ಮರುಕ್ಷಣವೇ ಹಿಂದೆ ಕರೆ ಮಾಡಿ ನಿಮ್ಮಿಂದ ಮಿಸ್ಡ್ ಕಾಲ್ ಬಂದಿತ್ತು. ನೀವ್ಯಾರು ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಸಲೋನಿ ತಪ್ಪಾಯಿತೆಂದು ಕರೆ ಕಟ್ ಮಾಡಿದ್ದಾಳೆ. ಆದರೆ ಮರುದಿನ ರಾಜೇಶ್ ಕರೆ ಮಾಡಿದ್ದಾನೆ. ಈ ವೇಳೆ ಸಲೋನಿ ಕಾಲ್ ಕಟ್ ಮಾಡಲು ಯತ್ನಿಸಿದಳಾದರೂ ರಾಜೇಶ್ ಮಾತನಾಡುವುದನ್ನು ಕೇಳಿ ಆಕೆಗೆ ಕರೆ ಕಟ್ ಮಾಡಲು ಮನಸ್ಸು ಒಪ್ಪಲಿಲ್ಲವಂತೆ.

ದಿನಗಳೆದಂತೆ ಇಬ್ಬರ ನಡುವೆ ಮಾತುಕತೆ ಹೆಚ್ಚಾಗಿದೆ. ಸುಮಾರು ಒಂದು ವರ್ಷ ಸಂಭಾಷಣೆ ನಡೆಸಿದ ಿವರಿಬ್ಬರು ಮದುವೆಯಾಗುವ ಆಲೋಚನೆ ಮಾಡಿದ್ದಾರೆ. ಆದರೆ ಸಲೋನಿಗೆ ಈ ಮೊದಲೇ ವಿವಾಹವಾಗಿದ್ದು, ಆಕೆಗೆ ಓರ್ವ ಮಗಳೂ ಇದ್ದಾಳೆ ಹಾಗೂ ಆಕೆ ಹಾಸ್ಟೆಲ್ ಒಂದರ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದಳು. ಈ ವಿಚಾರ ತಿಳಿದ ಬಳಿಕ ರಾಜೇಶ್ ಹಿಂದೆ ಸರಿಯದೆ ಮದುವೆಯಾಗುವ ನಿರ್ಧಾರ ಧೃಡಪಡಿಸಿದ್ದಾನೆ. ಇನ್ನು ಮದುವೆ ಕುರಿತಾಗಿ ಮಾತುಕತೆ ನಡೆಸಲು ರಾಜೇಶ್ ಹಾಸ್ಟೆಲ್'ಗೆ ಬಂದಾಗ ಆ ಊರಿನ ಜನರು ವಿರೋಧಿಸಿದ್ದರಾದರೂ ಇಬ್ಬರ ಪ್ರೀತಿಯ ಮುಂದೆ ಅವರು ಸುಮ್ಮನಾಗಿದ್ದಾರೆ. ಇದೀಗ ಇಬ್ಬರೂ ವಿವಾಹವಾಗಿದ್ದಾರೆ.

ಕೃಪೆ: NDTv

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?