‘ಆಮ್ ಆದ್ಮಿ’ ಈಗ ‘ಗಣ್ಯರ’ರೀತಿ ಸಂಚಾರ

Published : May 04, 2017, 06:04 PM ISTUpdated : Apr 11, 2018, 12:50 PM IST
‘ಆಮ್ ಆದ್ಮಿ’ ಈಗ ‘ಗಣ್ಯರ’ರೀತಿ ಸಂಚಾರ

ಸಾರಾಂಶ

ಇತ್ತೀಚಿನ ಪಾಲಿಕೆ ಚುನಾವಣೆಯಲ್ಲಿ ಆಪ್ ಅಭ್ಯರ್ಥಿಗಳು ವಿಐಪಿ ಲುಕ್‌ನಲ್ಲಿ ಕಾಣಿಸಿಕೊಳ್ಳದೇ ಜನಸಾಮಾನ್ಯರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಪಕ್ಷದ ಅಭ್ಯರ್ಥಿಗಳನ್ನು ಗುರುತಿಸಲು ಜನ ವಿಫಲರಾದರು ಎಂದು ಆತ್ಮಾವಲೋಕನ ಸಭೆಯಲ್ಲಿ ಬಹುತೇಕರು ಅಭಿಪ್ರಾಯಪಟ್ಟರು. ಶಾಸಕರು ಕೂಡ ಇದಕ್ಕೆ ದನಿಗೂಡಿಸಿದರು.

ನವದೆಹಲಿ(ಮೇ.04): ಇತ್ತೀಚಿನ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಕ್ಕೆ ಆತ್ಮಾವಲೋಕನ ಮಾಡಿಕೊಳ್ಳುತ್ತಿರುವ ಆಮ್ ಆದ್ಮಿ ಪಕ್ಷ, ತನ್ನ ಕೆಲ ನಿಲುವುಗಳನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದೆ. ಈವರೆಗೆ ಜನರ ನಡುವೆ ಜನಸಾಮಾನ್ಯರಂತೆಯೇ ಇರುತ್ತಿದ್ದ ಪಕ್ಷದ ಶಾಸಕರು ಇನ್ನು ಆ ಹಣೆಪಟ್ಟಿ ಕಳಚಿ ‘ವಿಐಪಿ ಲುಕ್’ನಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.

ಇತ್ತೀಚಿನ ಪಾಲಿಕೆ ಚುನಾವಣೆಯಲ್ಲಿ ಆಪ್ ಅಭ್ಯರ್ಥಿಗಳು ವಿಐಪಿ ಲುಕ್‌ನಲ್ಲಿ ಕಾಣಿಸಿಕೊಳ್ಳದೇ ಜನಸಾಮಾನ್ಯರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಪಕ್ಷದ ಅಭ್ಯರ್ಥಿಗಳನ್ನು ಗುರುತಿಸಲು ಜನ ವಿಫಲರಾದರು ಎಂದು ಆತ್ಮಾವಲೋಕನ ಸಭೆಯಲ್ಲಿ ಬಹುತೇಕರು ಅಭಿಪ್ರಾಯಪಟ್ಟರು. ಶಾಸಕರು ಕೂಡ ಇದಕ್ಕೆ ದನಿಗೂಡಿಸಿದರು.

ಹೀಗಾಗಿ ಶಾಸಕರು ಇನ್ನು ಮುಂದೆ ಜನಸಾಮಾನ್ಯರ ಲುಕ್‌ನಲ್ಲಿ ಕಾಣಿಸಿಕೊಳ್ಳಬಾರದು. ಜನರು ಗುರುತಿಸುವಂತೆ ವಿವಿಐಪಿ ರಾಜಕಾರಣಿಗಳ ರೀತಿ ಗರಿಗರಿ ಖಾದಿ ದಿರಿಸು ಧರಿಸಬೇಕು. ಕನಿಷ್ಠ 4 ಪಟಾಲಂಗಳ ಜೊತೆ ಕ್ಷೇತ್ರ ಸುತ್ತಬೇಕು ಎಂದು ನಿರ್ಧರಿಸಲಾಗಿದೆ.

‘ಇದು ಒಂಥರಾ ಮೋಜಿನ ನಿರ್ಧಾರ. ಆದರೆ ಸತ್ಯ. ಶಾಸಕರು ಕ್ಷೇತ್ರ ಸಂಚರಿಸುವಾಗ ಜನ ಗುರುತಿಸುವಂತಾಗಲು ನಾಲ್ವರು ಹಿಂಬಾಲಕರು ಜೊತೆಯಲ್ಲೇ ಇರಬೇಕು. ಶಾಸಕರು ಇನ್ನುಮುಂದೆ ಕಡ್ಡಾಯವಾಗಿ ಆಮ್ ಆದ್ಮಿ ಟೋಪಿ (ಗಾಂ ಟೋಪಿ) ಹಾಕಬೇಕು ಎಂದು ನಿರ್ಧರಿಸಲಾಗಿದೆ’ ಎಂದು ಪಕ್ಷದ ಸ್ಟಾರ್ ಶಾಸಕಿ ಅಲಕಾ ಲಾಂಬಾ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಡಿದು ರಸ್ತೆಗೆ ಬಿದ್ದ ವ್ಯಕ್ತಿ ಬಸ್ ಚಕ್ರಕ್ಕೆ ಸಿಲುಕಿ ಸಾವು: ಸಾವಿಗೆ ಹೊಣೆ ಯಾರು? ಬಸ್ ಚಾಲಕನೇ? ಸರ್ಕಾರವೇ? ಬಾರ್ ಮಾಲೀಕರೇ?
ಕೇರಳದಲ್ಲಿ ಉತ್ತರ ಭಾರತದ ಕಾರ್ಮಿಕನ ಮೇಲೆ ಗುಂಪು ಹತ್ಯೆ, 'ಆತನ ದೇಹದ ಮೇಲೆ ಗಾಯವಾಗದ ಪಾರ್ಟ್‌ಗಳೇ ಇಲ್ಲ' ಎಂದ ವೈದ್ಯರು!