ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಭಾರತದ ತೆಕ್ಕೆಗೆ!

By Web DeskFirst Published Nov 28, 2018, 3:03 PM IST
Highlights

ಭಾರತವು ದೀರ್ಘ ಸಮಯದಿಂದ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಹಿಂಪಡೆಯಲು ಯತ್ನಿಸುತ್ತಿದೆ. ಇದಕ್ಕಾಗಿ ಹಲವಾರು ಹೋರಾಟಗಳನ್ನೂ ನಡೆಸಿದೆ. ಹೀಗಿದ್ದರೂ ಕಳೆದುಕೊಂಡ ಕಾಶ್ಮೀರವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಆದರೀಗ ಚೀನಾ ಮಾಧ್ಯಮವೊಂದು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರವನ್ನು ಭಾರತದ ಭಾಗವಾಗಿ ತೋರಿಸುವ ಮೂಲಕ ಚರ್ಚೆ ಹುಟ್ಟು ಹಾಕಿದೆ.

ಬೀಜಿಂಗ್[ನ.28]: ಚೀನಾವು ಇದೇ ಮೊದಲ ಬಾರಿ ಅಚ್ಚರಿ ಮೂಡಿಸುವ ಹೆಜ್ಜೆ ಇರಿಸಿದೆ. ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಪ್ರದೇಶವನ್ನು, ಭಾರತದ ಭಾಗವಾಗಿ ತೋರಿಸಿದೆ. ಇಲ್ಲಿನ ರಾಷ್ಟ್ರೀಯ ಮಾಧ್ಯಮವೊಂದು ಜಮ್ಮು ಕಾಶ್ಮೀರದ ಮೂಲ ನಕ್ಷೆಯನ್ನು ಪ್ರಸಾರ ಮಾಡಿದ್ದು ಸದ್ಯ ಸದ್ಯ ಚರ್ಚೆ ಹುಟ್ಟು ಹಾಕಿದೆ.

ಚೀನಾದ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ CGTN(China Global Television Network),ಪಾಕಿಸ್ತಾನದ ಕರಾಚಿಯಲ್ಲಿ ತನ್ನ ರಾಯಭಾರಿ ಕಚೇರಿ ಮೇಲೆ ನಡೆದ ಉಗ್ರ ದಾಳಿಯ ಸುದ್ದಿ ಪ್ರಸಾರ ನಡೆಸುತ್ತಿದ್ದಾಗ ಈ ನಕ್ಷೆಯನ್ನು ಪ್ರಸಾರ ಮಾಡಿದೆ. ಭಾರತವು ದೀರ್ಘ ಕಾಲದಿಂದ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ತಮಗೆ ಸೇರಬೇಕೆಂದು ಹೋರಾಟ ನಡೆಸುತ್ತಿದೆಯಾದರೂ ಇದು ಸಾಧ್ಯವಾಗಿಲ್ಲ. ಹೀಗಿರುವಾಗ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಪ್ರದೇಶವನ್ನು ಭಾರತದ ಭಾಗವಾಗಿ ತೋರಿಸಿರುವುದು ಮಾತ್ರ ನೆರೆ ರಾಷ್ಟ್ರ ಪಾಕ್ ಗೆ ನುಂಗಲಾರದ ತುತ್ತಾಗಿದೆ.

ಆದರೂ ಚೀನಾದ ಮಾಧ್ಯಮ ಇದನ್ನು ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಿದೆಯೋ ಅಥವಾ ಇದು ಕಣ್ತಪ್ಪಿನಿಂದಾದ ಎಡವಟ್ಟೋ ಎಂಬುವುದು ಮಾತ್ರ ಸ್ಪಷ್ಟವಾಗಿಲ್ಲ. ಆದರೆ ಸರ್ಕಾರದ ವಿರುದ್ಧವಾಗಿ ಮಾಧ್ಯಮವೊಂದು ಇಂತಹ ಕೆಲಸ ಮಾಡುವುದು ಅಸಾಧ್ಯದ ಮಾತಾಗಿದೆ. 
 

click me!