ತಂದೆ ಧೂಮಪಾನಿಯಾಗಿದ್ದರೆ ಗಂಡು ಮಕ್ಕಳಿಗೆ ಮಕ್ಕಳಾಗಲ್ಲ.. ಅಧ್ಯಯನ ಹೇಳೋದೆನು?

By Web DeskFirst Published Nov 26, 2018, 5:17 PM IST
Highlights

ಧೂಮಪಾನದಿಂದ ಸಾವು ಸಂಭವಿಸುತ್ತೆ ಎಂಬ ಎಚ್ಚರಿಕೆ ಹೇಳಿಕೆಯನ್ನು ಮತ್ತೆ ಮತ್ತೆ ಕೇಳುತ್ತಲೇ ಇರುತ್ತವೆ. ಧೂಮಪಾನ ಕ್ಯಾನ್ಸರ್ ಕಾರಕ, ಶ್ವಾಸಕೋಶದ ತೊಂದರೆ ತಂದಿಡುತ್ತದೆ ಎಂಬುದೆಲ್ಲ ಗೊತ್ತು. ಈಗ ಮತ್ತೊಂದು ಆಘಾತಕಾರಿ ಸಂಗತಿಯೂ ಬಹಿರಂಗವಾಗಿದೆ.

ಸ್ವೀಡನ್[ನ.26]  ತಂದೆಯಿಂದ ಮಕ್ಕಳಿಗೆ ವಂಶವಾಹಿ ರೋಗಗಳು ಬರುವುದನ್ನು ಕೇಳಿದ್ದೇವೆ. ಆದರೆ ಇದು ಅದಕ್ಕಿಂತ ಭಯ ಬೀಳಿಸುವ ಸುದ್ದಿ. ತಂದೆ ಧೂಮಪಾನ ಮಾಡುತ್ತಿದ್ದರೆ ಅವರಿಗೆ ಹುಟ್ಟುವ ಗಂಡು ಮಕ್ಕಳು ಸಮಸ್ಯೆ ಎದುರಿಸಬೇಕಾಗುತ್ತದೆ.  ತಂದೆ ಧೂಮಪಾನ ಮಾಡುತ್ತಿದ್ದರೆ ಆ ಮಕ್ಕಳ ವೀರ್ಯ ಪ್ರಮಾಣ ಶೇ.51 ಕುಂಠಿತವಾಗುತ್ತದೆ ಎಂದು ಅಧ್ಯಯನ ಹೇಳಿದೆ.

ಹೆಂಡತಿ ಗರ್ಭಿಣಿಯಾಗುವ  ವೇಳೆ ಆ  ಮಗುವಿನ ತಂದೆ ಧೂಮಪಾನಕ್ಕೆ ಬಲಿಯಾಗಿದ್ದರೆ ನಂತರ ಮಕ್ಕಳು ಸಮಸ್ಯೆ ಎದುರಿಸಬೇಕಾಗುತ್ತದೆ.  ತಾಯಿ ಧೂಮಪಾನಿಯಾಗಿದ್ದರೆ ಶೇ. 41 ಕೊರತೆ ಕಂಡುಬಂದರೆ ತಂದೆ ಧೂಮಪಾನಿಯಾಗಿದ್ದರೆ ಶೇ. 51 ಕೊರತೆ ಕಂಡು ಬರುತ್ತದೆ ಎಂದು ವರದಿ ಹೇಳಿದೆ.

ಮಗು ಆಸೆಗೆ ತಣ್ಣೀರು, ಬ್ರಿಟನ್‌ನಲ್ಲಿ ವೀರ್ಯ ಕೊರತೆ...ಕಾರಣ?

ಸ್ವೀಡನ್ ಲುವಾಂಡ್ ಯುನಿವರ್ಸಿಟಿಯ ಪ್ರೋಫೆಸರ್ ಜೋನಾಥನ್ ಅಕ್ಸೆಲ್ ಸನ್ ಹೇಳುವಂತೆ, ವೀರ್ಯಾಣುಗಳ ಸಂಖ್ಯೆ ಮತ್ತು ಗರ್ಭವತಿಯಾಗುವ ವಿಚಾರಕ್ಕೂ ನೇರವಾದ ಸಂಬಂಧವಿದೆ. ಧೂಮಪಾನಿ ತಂದೆಯ ಮಕ್ಕಳು ಮಕ್ಕಳ ಪಡೆದುಕೊಳ್ಳುವ ವಿಚಾರದಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ..

ತಂದೆ ಧೂಮಪಾನ ಮಾಡಿದರೆ ಹೆಣ್ಣು ಮಕ್ಕಳಿಗೆ ಅಲ್ಪಾಯುಷ್ಯದಂತಹ ಸಮಸ್ಯೆ ತಂದೊಡ್ಡಬಹುದು ಎಂದು ವರದಿ ಉಲ್ಲೇಖಿಸಿದೆ.. 7 ಮತ್ತು 20 ವರ್ಷದ ಒಳಗಿನ 104 ಜನ ಸ್ವೀಡನ್ ಯುವಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

click me!