
ಭೋಪಾಲ್(ಫೆ.10): 1962ರ ಭಾರತ- ಚೀನಾ ಸಮರ ವೇಳೆ ಭಾರತ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ, ಐದು ದಶಕಗಳಿಂದ ಇಲ್ಲೇ ನೆಲೆಸಿರುವ 77 ವರ್ಷದ ಚೀನಿ ಯೋಧನೊಬ್ಬ ಇದೇ ಮೊದಲ ಬಾರಿಗೆ ತನ್ನ ತಾಯ್ನಾಡಿಗೆ ತೆರಳುತ್ತಿದ್ದಾನೆ.
1962ರ ಚೀನಾ-ಭಾರತ ಯುದ್ಧದ ಸಂದರ್ಭದಲ್ಲಿ ಕತ್ತಲಲ್ಲಿ ಅಚಾನಕ್ ಆಗಿ ಗಡಿ ದಾಟಿ ವಾಂಗ್ ಕೀ ಭಾರತಕ್ಕೆ ಬಂದಿದ್ದ. ಆತನನ್ನು ಯುದ್ಧಪರಾಯನ್ನಾಗಿ ಪರಿಗಣಿಸಿ ಬಂಧನಕ್ಕೊಳಪಡಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಬಾಲಾಘಾಟ್‌ನಲ್ಲಿ ನೆಲೆ ನಿಂತ ಆತ, ಖಾಸಗಿ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಉದ್ಯೋಗ ಪಡೆದ. ತವರಿಗೆ ಹೋಗಲು ಪ್ರಯತ್ನ ಪಟ್ಟನಾದರೂ ಅದು ಸಾಧ್ಯವಾಗಲೇ ಇಲ್ಲ. ಬಳಿಕ ಸ್ಥಳೀಯ ಯುವತಿಯನ್ನು ವಿವಾಹವಾಗಿ ಬಾಲಾಘಾಟ್‌ನಲ್ಲೇ ನೆಲೆಸಿದ್ದ.
ಚೀನಾದವನು ಎಂಬ ಕಾರಣಕ್ಕೆ ಭಾರತೀಯ ಪೌರತ್ವ ಸಿಕ್ಕಿರಲಿಲ್ಲ. ಚೀನಾಕ್ಕೆ ಹೋಗಲು ಸರ್ಕಾರವೂ ಅವಕಾಶ ಕೊಟ್ಟಿರಲಿಲ್ಲ. ಈ ಬಗ್ಗೆ ಕಾನೂನು ಹೋರಾಟವನ್ನು ಈತ ನಡೆಸಿದ್ದನಾದರೂ ಅದು ಸಲವಾಗಿರಲಿಲ್ಲ. 2009ರಲ್ಲಿ ತನ್ನ ಬಂಧುವೊಬ್ಬನಿಗೆ ತನ್ನ ಗೋಳು ತೋಡಿಕೊಂಡಿದ್ದ. ಆತ ಈ ವಿಷಯವನ್ನು ಚೀನಾ ಸರ್ಕಾರದ ಗಮನಕ್ಕೆ ತಂದಿದ್ದರಿಂದ ಈಗ ವಾಂಗ್ ಕೀ ತವರಿಗೆ ಹೋಗುವಂತಾಗಿದೆ. ಪತ್ನಿ ಸುಶೀಲಾ ಹಾಗೂ ಪುತ್ರ ವಿಷ್ಣು ಹಾಗೂ ಇಬ್ಬರು ಕುಟುಂಬ ಸದಸ್ಯರ ಜತೆ ಆತ ಚೀನಾಕ್ಕೆ ಹಾರುತ್ತಿದ್ದಾನೆ ಎಂದು ಬಾಲಾಘಾಟ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಳಿಕ ಆತನನ್ನು ಬಂಧಮುಕ್ತಗೊಳಿಸಲಾಗಿತ್ತು. ಚೀನಾಕ್ಕೆ ಮರಳಲು ಸಾಧ್ಯವಾಗದೆ ಆತ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ನೆಲೆಸಿ, ಸುಶೀಲ ಎಂಬಾಕೆಯನ್ನು ವರಿಸಿದ್ದ. ಈ ದಂಪತಿಗೆ ವಿಷ್ಣು ಎಂಬ ಪುತ್ರನೂ ಇದ್ದ. ಚೀನಾಕ್ಕೆ ಹೋಗಿ ಬಂಧುಗಳನ್ನು ಭೇಟಿ ಮಾಡುವ ಉತ್ಕಟ ಬಯಕೆ ಈತನಿಗೆ ಇತ್ತಾದರೂ ಅದು ಈಡೇರಿರಲಿಲ್ಲ.
ಆದರೆ, ಈ ವೇಳೆ ಚೀನಾಗೆ ತೆರಳದೆ, ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ನೆಲೆಸಿ ಸ್ಥಳೀಯ ಯುವತಿ ಸುಶೀಲರನ್ನು ವರಿಸಿದ್ದರು. ಆ ದಂಪತಿಗೆ ಇದೀಗ ವಿಷ್ಣು ಎಂಬ ಪುತ್ರನಿದ್ದು, ಒಟ್ಟು ನಾಲ್ವರು ವಿಮಾನದ ಮೂಲಕ ಚೀನಾಗೆ ತೆರಳಲಿದ್ದಾರೆ ಎಂದು ಬಾಲಘಾಟ್ ಜಿಲ್ಲಾಧಿಕಾರಿ ಭಾರತ್ ಯಾದವ್ ತಿಳಿಸಿದ್ದಾರೆ. ವಾಂಗ್ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ಶುಕ್ರವಾರ ವೀಸಾ ಪಡೆದುಕೊಂಡಿದ್ದು, ಶನಿವಾರ ಚೀನಾಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. ವಾಂಗ್ ಮತ್ತು ಕುಟುಂಬಸ್ಥರು ಶನಿವಾರವೇ ಚೀನಾಕ್ಕೆ ಮರಳಲಿದ್ದಾರೆ ಬೀಜಿಂಗ್ ಮೂಲಗಳು ತಿಳಿಸಿವೆ. ಭಾರತಕ್ಕೆ ಆಗಮಿಸಿದ್ದ ಚೀನಾದ ರಾಯಭಾರಿಗಳು ವಾಂಗ್‌ನನ್ನು ಭೇಟಿ ಮಾಡಿದ ಒಂದು ವಾರದೊಳಗೆ ಈ ಬೆಳವಣಿಗೆಯಾಗಿದೆ ಎಂಬುದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.