ಒರಾಕಲ್, ಎಲ್ ಅಂಡ್ ಟಿ ಹೂಡಿಕೆ; ಭಾರಿ ಉದ್ಯೋಗಾವಕಾಶ

Published : Feb 10, 2017, 04:12 PM ISTUpdated : Apr 11, 2018, 12:37 PM IST
ಒರಾಕಲ್, ಎಲ್ ಅಂಡ್ ಟಿ ಹೂಡಿಕೆ; ಭಾರಿ ಉದ್ಯೋಗಾವಕಾಶ

ಸಾರಾಂಶ

ಬೆಂಗಳೂರು (ಫೆ.10): ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಗಳಲ್ಲೊಂದಾಗಿರುವ ಒರಾಕಲ್ ಮತ್ತು ಎಲ್ ಅಂಡ್ ಟಿ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು ಮುಖ್ಯಮಂತ್ರಿ ಅಧ್ಯಕ್ಷತೆಯ ಹೈಪವರ್ ಕಮಿಟಿ ಈ ಹೂಡಿಕೆಗೆ ಒಪ್ಪಿಗೆ ನೀಡಲಿದೆ. ಒಟ್ಟು ಸುಮಾರು ೬ ಸಾವಿರ ಕೋಟಿ ಮೊತ್ತದ ಹೂಡಿಕೆಯಾಗಲಿದ್ದು ಹದಿನೈದು ಸಾವಿರದಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭಾರಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಬೆಂಗಳೂರು (ಫೆ.10): ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಗಳಲ್ಲೊಂದಾಗಿರುವ ಒರಾಕಲ್ ಮತ್ತು ಎಲ್ ಅಂಡ್ ಟಿ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು ಮುಖ್ಯಮಂತ್ರಿ ಅಧ್ಯಕ್ಷತೆಯ ಹೈಪವರ್ ಕಮಿಟಿ ಈ ಹೂಡಿಕೆಗೆ ಒಪ್ಪಿಗೆ ನೀಡಲಿದೆ. ಒಟ್ಟು ಸುಮಾರು 6 ಸಾವಿರ ಕೋಟಿ ಮೊತ್ತದ ಹೂಡಿಕೆಯಾಗಲಿದ್ದು ಹದಿನೈದು ಸಾವಿರದಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭಾರಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದೇಶಪಾಂಡೆ ಒರಾಕಲ್ ಸಂಸ್ಥೆಯು ಕ್ಯಾಲಿಫೋರ್ನಿಯಾ ಬಿಟ್ಟರೆ ವಿಶ್ವದಲ್ಲೇ ಎರಡನೆಯ ಅತಿ ದೊಡ್ಡ ಸಾಫ್ಟ್‌ವೇರ್ ಫೆಸಿಲಿಟಿ  ಸೆಂಟರ್‌ನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಿದೆ. ₹2448  ಕೋಟಿ ಹೂಡಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.ನಗರದ ಹೊರವಲಯದ ಕಾಡುಬೀಸನಹಳ್ಳಿಯಲ್ಲಿ ಕೇಂದ್ರ ಸ್ಥಾಪನೆ ಆಗಲಿದೆ ಎಂದರು. ಎಲ್ ಅಂಡ್ ಟಿ  ಯಲಹಂಕದ ಬಳಿ 48 ಎಕರೆ ಜಮೀನು ಹೊಂದಿದ್ದು ಇಲ್ಲಿ ವಿಶೇಷ ಆರ್ಥಿಕ ವಲಯ(ಎಸ್‌ಇಜಡ್) ಸ್ಥಾಪನೆಗೆ ಮುಂದಾಗಿದೆ. ₹1200 ಕೋಟಿ ಹೂಡಿಕೆಯಲ್ಲಿ ಎಸ್‌ಇಜಡ್ ಸ್ಥಾಪಿಸಲಿದ್ದು ರೂ.800 ಕೋಟಿ ವೆಚ್ಛದಲ್ಲಿ ಮತ್ತೊಂದು ಐಟಿ ಪಾರ್ಕ್ ಸ್ಥಾಪನೆಯ ಉದ್ದೇಶ ಹೊಂದಿದೆ. ಮೂರು ವರ್ಷಗಳಲ್ಲಿ ಎಸ್‌ಇಜಡ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದ್ದು 96 ಉದ್ಯೋಗ ಸೃಜನೆ ಆಗಲಿದೆ. ಬೇಳಗಾವಿಯಲ್ಲಿ ದೇವಿ ಸಿಟಿ ಕೈಗಾರಿಕಾ ಪಾರ್ಕ್ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದು ₹1149 ಕೋಟಿ ಹೂಡಿಕೆಯ ಈ ಕೈಗಾರಿಕಾ ಪಾರ್ಕ್ 9500 ಉದ್ಯೋಗಾವಕಾಶ ನೀಡಲಿದೆ ಎಂದು ವಿವರಿಸಿದರು.

ಆಪ್‌ಲ್ ಐಫೋನ್

ಆಪಲ್ ಕಂಪನಿಯು ತನ್ನ ಐ ಫೋನ್‌ಗಳನ್ನು ಪೂರ್ಣ ಪ್ರಮಾಣದಲ್ಲಿ  ಭಾರತದಲ್ಲೇ ಉತ್ಪಾದಿಸಲು ಉದ್ದೇಶಿಸಿದ್ದು  ಉತ್ಪಾದನಾ ಕೇಂದ್ರವನ್ನು ಬೆಂಗಳೂರಿನಲ್ಲೇ ಸ್ಥಾಪಿಸಲಿದೆ.  ಕೇಂದ್ರ ಸರ್ಕಾರವು ಕೆಲವೊಂದು ಸೌಕರ್ಯಗಳನ್ನು ಒದಗಿಸಬೇಕಿದ್ದು ಈ ಪ್ರಸ್ತಾವನೆ ಕೇಂದ್ರದ ಬಳಿ ಬಾಕಿ ಇದೆ. ಪೂರ್ಣ ಪ್ರಮಾಣದ ಉತ್ಪಾದನೆ ಆರಂಭವಾಗುವವರೆಗೂ ಐಫೋನ್‌ಗಳ ಜೋಡಣೆ ಮಾಡಲು ಉದ್ದೇಶಿಸಿದೆ ಎಂದು ದೇಶಪಾಂಡೆ ಹೇಳಿದರು.

ಏರೋ ಇಂಡಿಯಾ ಬೆಂಗಳೂರಲ್ಲೇ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 11ನೇ ಆವೃತ್ತಿ ಫೆ.14 ರಿಂದ ಆರಂಭವಾಗಲಿದ್ದು ರಾಜ್ಯದ ಅನೇಕ ಏರೋಸ್ಪೇಸ್ ವಲಯದ ಕೈಗಾರಿಕೆಗಳಿಗೆ ಉತ್ತಮ ಅವಕಾಶ ಕಲ್ಪಿಸಲಿದೆ.

ರಾಜ್ಯ ಸರ್ಕಾರವೇ ಸುಮಾರು ೫೦ ಕಂಪನಿಗಳಿಗೆ ರಿಯಾಯ್ತಿ ದರದಲ್ಲಿ ಪ್ರದರ್ಶನ ಮಳಿಗೆಗಳನ್ನು ಒದಗಿಸಿದ್ದು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ ಎಂದು ಸಚಿವ ಆರ್.ವಿ.ದೇಶಪಾಂಡೆ  ತಿಳಿಸಿದರು.

ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಗೋವಾಕ್ಕೆ ಸ್ಥಳಾಂತರಿಸುವುದು ಕೇವಲ ವದಂತಿಯಾಗಿದೆ. ಬೆಂಗಳೂರು ಎಂಬ ಕಾರಣಕ್ಕೆ ಇಲ್ಲಿ ಏರೋ ಇಂಡಿಯಾ ನಡೆಯುತ್ತಿಲ್ಲ. ಬದಲಾಗಿ ಇಲ್ಲಿನ ಸೌಕರ್ಯ, ಹವಾಮಾನ, ಇನ್ನಿತರ ವಿಚಾರಗಳೂ ಸೇರಿದ್ದು ಏಷ್ಯಾದ ಅತಿದೊಡ್ಡ ಪ್ರದರ್ಶನ ಆಯೋಜನೆಗೆ ಬೆಂಗಳೂರು ಸಮರ್ಥವಾಗಿರುವುದರಿಂದ ಇಲ್ಲೇ ಆಯೋಜನೆ ಮಾಡಲಾಗುತ್ತಿದೆ.  ಏರೋ ಇಂಡಿಯಾ ಬೆಂಗಳೂರಿನಲ್ಲೇ ಮುಂದುವರೆಯಲಿದೆ ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ