
ಬೀಜಿಂಗ್: ತದ್ರೂಪಿ ಮಂಗಗಳನ್ನು ಸೃಷ್ಟಿಸುವಲ್ಲಿ ಚೀನಾ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. 20 ವರ್ಷಗಳ ಹಿಂದೆ ತದ್ರೂಪಿ ಕುರಿಯೊಂದನ್ನು ಸೃಷ್ಟಿಸಲಾಗಿತ್ತು. ಈಗ ಅದೇ ಮಾದರಿಯನ್ನು ಸುಧಾರಿತ ವಿಧಾನದೊಂದಿಗೆ ಬಳಸಿ ಎರಡು ವಾನರಗಳನ್ನು ಚೀನೀ ವಿಜ್ಞಾನಿಗಳು ಸೃಷ್ಟಿ ಮಾಡಿದ್ದಾರೆ. ವಿಜ್ಞಾನಿಗಳು ಸೃಷ್ಟಿ ಮಾಡಿದ ಮಂಗಗಳು ಆರೋಗ್ಯವಾಗಿವೆ ಎಂದು ಹೇಳಿದ್ದಾರೆ.
ಶಾಂಘೈನ ಚೀನಾ ಅಕಾಡೆಮಿಯಲ್ಲಿನ ಹುವಾ ಹುವಾ ಹಾಗೂ ಝಾಂಗ್ ಝಾಂಗ್ ಎಂಬ ಹೆಸರನ್ನು ಮಂಗಗಳಿಗೆ ಇಡಲಾಗಿದೆ. ಈ ತಂತ್ರಜ್ಞಾನ ಬಳಸಿ ನಾಯಿ, ಹಂದಿ, ಬೆಕ್ಕು ಮುಂತಾದವನ್ನು ಸೃಷ್ಟಿಸಲಾಗಿತ್ತು. ಆದರೆ ಮಂಗಗಳ ಸೃಷ್ಟಿ ಸವಾಲಾಗಿತ್ತು.
ಆದರೆ, ಇದೀಗ ಯಶಸ್ವಿಯಾಗಿದೆ. ಮಾನವನಿಗೆ ತಗಲುವ ರೋಗಗಳಿಗೆ ಔಷಧ ಕಂಡು ಹಿಡಿಯಲು ಔಷಧ ಕಂಪನಿಗಳು ಪ್ರತಿ ವರ್ಷ 30 ಸಾವಿರದಿಂದ 40 ಮಂಗಗಳನ್ನು ಬಳಸುತ್ತವೆ. ಕೋತಿಗಳನ್ನು ಈವರೆಗೆ ಕಾಡಿನಿಂದ ಹಿಡಿದು ತಂದು ಸಂಶೋಧನೆಗೆ ಬಳಸಲಾಗುತ್ತಿತ್ತು. ಆದರೆ ಈಗ ತದ್ರೂಪಿ ಮಂಗಗಳನ್ನು ಸೃಷ್ಟಿಸುವಲ್ಲಿ ಸಿಕ್ಕಿರುವ ಯಶಸ್ಸಿನಿಂದ, ಸಂಶೋಧನೆಗೆ ನೈಜ ಮಂಗಗಳ ಬದಲು ತದ್ರೂಪಿ ವಾನರಗಳನ್ನೇ ಬಳಸಲು ಅನುವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.