
ನವದೆಹಲಿ(ಜೂನ್ 14): ಭಾರತವನ್ನು ಹಣಿಯುವ ಉದ್ದೇಶದಿಂದ ಪಾಕಿಸ್ತಾನ ಏನೇ ಮಾಡಿದರೂ ಬೆಂಬಲ ಕೊಡುವ ಚೀನಾ ದೇಶಕ್ಕೆ ಈಗ ಪಾಕಿಸ್ತಾನವೇ ತಲೆನೋವಾಗಿ ಪರಿಣಮಿಸುವ ಸೂಚನೆ ಸಿಕ್ಕಿದೆ. ವಾರದ ಹಿಂದೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಇಬ್ಬರು ಚೀನೀ ಪ್ರಜೆಗಳನ್ನು ಅಪಹರಿಸಿ ಹತ್ಯೆಗೈದಿರುವ ಘಟನೆಯ ಬಳಿಕ ಚೀನಾದಲ್ಲಿ ಜ್ಞಾನೋದಯವಾದಂತಿದೆ. ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯು ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರ ಎಂದು ಬಣ್ಣಿಸಿದೆ. ಅಲ್ಲದೇ, ಪಾಕಿಸ್ತಾನದಲ್ಲಿ ಚೀನಾ ಸಿಕ್ಕಾಪಟ್ಟೆ ಬಂಡವಾಳ ಹಾಕಿ ಮಾಡುತ್ತಿರುವ ಸಿಪೆಕ್ ಯೋಜನೆ ಅಪಾಯದಲ್ಲಿದೆ ಎಂದು ಪತ್ರಿಕೆಯು ಎಚ್ಚರಿಸಿದೆ.
ಚೀನಾ ದೇಶವು ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ತಲೆಹಾಕುವುದಿಲ್ಲ. ಈ ಕಾರಣಕ್ಕೆ ಉಗ್ರಗಾಮಿಗಳು ಚೀನಾವನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಕಡಿಮೆ. ಆದರೆ, ವಿಶ್ವಭೂಪಟದಲ್ಲಿ ಚೀನಾದ ಆರ್ಥಿಕತೆ ಮತ್ತು ಪ್ರಭಾವಳಿ ಹೆಚ್ಚುತ್ತಿರುವುದರಿಂದ ಉಗ್ರರು ಹಣ ಮತ್ತು ಹೆಸರಿಗಾಗಿ ಚೀನೀಯರನ್ನು ಗುರಿ ಮಾಡಿ ದಾಳಿ ನಡೆಸಬಹುದು ಎಂದು ಚೀನಾದ ಪತ್ರಿಕೆ ಅಭಿಪ್ರಾಯಪಟ್ಟಿದೆ.
ಅಂತಾರಾಷ್ಟ್ರೀಯ ಭಯೋತ್ಪಾದನೆಯ ಅಡ್ಡೆಯಾಗಿರುವ ಪಾಕಿಸ್ತಾನದಲ್ಲಿ ಭದ್ರತಾ ವ್ಯವಸ್ಥೆ ದುರ್ಬಲವಾಗಿರುವುದು ಮೊದಲಿನಿಂದಲೂ ಗೊತ್ತಿರುವ ವಿಚಾರವೇ. ಪಾಕಿಸ್ತಾನದಲ್ಲಿರುವ ಚೀನಾದ ಯೋಜನೆಗಳಿಗೆ ಈಗ ಅಪಾಯ ಎದುರಾಗಲಿದೆ ಎಂದು ಗ್ಲೋಬಲ್ ಟೈಮ್ಸ್'ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಬರೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.