
ಲಂಡನ್: ಕುಖ್ಯಾತ ಉಗ್ರ ಸಂಘಟನೆ ಐಸಿಸ್'ಗೆ ಸ್ಫೋಟಕ ವಸ್ತುಗಳನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳು ಭಾರತದ 7 ಕಂಪನಿಗಳಿಂದ ಪೂರೈಕೆಯಾಗುತ್ತಿದೆ ಎಂದು ಕಾಂಫ್ಲಿಕ್ಟ್ ಆರ್ಮಮೆಂಟ್ ರಿಸರ್ಚ್ (CAR) ಸಂಸ್ಥೆಯು ಕೈಗೊಂಡ ಅಧ್ಯಯನದಿಂದ ತಿಳಿದು ಬಂದಿದೆಯೆಂದು ಆಂಗ್ಲ ದೈನಿಕ ಇಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಟರ್ಕಿ, ಬ್ರೆಝಿಲ್ ಹಾಗೂ ಅಮೆರಿಕಾ ಸೇರಿದಂತೆ ಸುಮಾರು 20 ದೇಶಗಳ 51 ಕಂಪನಿಗಳು ಐಸಿಸ್'ಗೆ ಸ್ಫೋಟಕಗಳನ್ನು ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳನ್ನು ಪೂರೈಸುತ್ತಿವೆ, ಅವುಗಳಲ್ಲಿ ಭಾರತದ ಏಳು ಕಂಪನಿಗಳಿವೆ ಎನ್ನಲಾಗಿದೆ.
ಈವರೆಗೆ ಸುಮಾರು 700 ರೀತಿಯ ಸಾಮಾಗ್ರಿಗಳನ್ನು ಈ ಕಂಪನಿಗಳು ಉತ್ಪಾದನೆ/ ಮಾರಾಟ ಮಾಡಿವೆ ಎನ್ನಲಾಗಿದೆ. ಅವುಗಳಲ್ಲಿ 13 ಕಂಪನಿಗಳು ಟರ್ಕಿಗೆ ಸೇರಿವೆ.
ಈ ಅಧ್ಯಯನ ನಡೆಸಲು ಸಂಸ್ಥೆಗೆ 20 ತಿಂಗಳುಗಳು ಬೇಕಾಗಿವೆ. ಭಾರತದ ಕಂಪನಿಗಳ ಪೈಕಿ ಬಹುತೇಕ ಹೆಚ್ಚಿನವು ಡಿಟೊನೇಟರ್/ ಡಿಟೊನೇಟರ್ ಕಾರ್ಡ್/ ಸೇಫ್ಟಿ ಫ್ಯೂಸ್'ಗಳನ್ನು ತಯಾರಿಸುವ ಕಂಪನಿಗಳಾಗಿವೆ ಎಂದು ವರದಿ ಹೇಳಿದೆ. ಇವುಗಳನ್ನು ತಯಾರಿಸಲು ಹಾಗೂ ರಫ್ತು ಮಾಡಲು ಸರ್ಕಾರದ ಅನುಮತಿ ಬೇಕಾಗಿದೆ. ಈ ಸಾಮಾಗ್ರಿಗಳು ಭಾರತದಿಂದ ಲೆಬನಾನ್ ಹಾಗೂ ಟರ್ಕಿಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.
ರಿಮೋಟ್ ಡಿಟೊನೇಟರ್'ಗಾಗಿ ಉಗ್ರ ಸಂಘಟನೆಯು ಬಹುತೇಕವಾಗಿ ನೋಕಿಯಾ 105 ಮೊಬೈಲನ್ನು ಬಳಸುತ್ತದೆ ಎಂದು ವರದಿ ಹೇಳಿದೆ. ರೋಮಾನಿಯಾ, ನೆದರ್'ಲ್ಯಾಂಡ್ಸ್, ಚೀನಾ, ಸ್ವಿಟ್ಜರ್'ಲ್ಯಾಂಡ್, ಆಸ್ಟ್ರಿಯಾ, ಹಾಗೂ ಚೆಕ್ ರಿಪಬ್ಲಿಕ್ ದೇಶಗಳು ಪಟ್ಟಿಯಲ್ಲಿ ಸೇರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.